ಕುಂದಾಪುರ: ಅಗಲಿದ ಪತ್ನಿಯ ಫೋಟೋದೊಂದಿಗೆ ದಾಂಪತ್ಯ ಜೀವನದ ರಜತ ಸಂಭ್ರಮ ಆಚರಿಸಿಕೊಂಡ ಪತಿರಾಯ!

Views: 0
ಕುಂದಾಪುರ:ಅನಾರೋಗ್ಯದಿಂದ ಮೃತಪಟ್ಟ ಪತ್ನಿಯ ಛಾಯಾಚಿತ್ರದ ಪ್ರತಿಕೃತಿ ಇಟ್ಟು ದಾಂಪತ್ಯ ಜೀವನದ ರಜತ ಸಂಭ್ರಮ ಕಾರ್ಯಕ್ರಮ ಕುಂದಾಪುರ ಬಡಾಕೆರೆಯ ಲಕ್ಷ್ಮೀ ಜನಾರ್ದನ ಸಭಾಗ್ರಹದಲ್ಲಿ ನಡೆದ ಅಪರೂಪದ ಕಾರ್ಯಕ್ರಮವಾಗಿದೆ.
ಅಗಲಿದ ಪತ್ನಿಯ ಬಯಕೆಯಂತೆ ದಾಂಪತ್ಯ ಜೀವನದ ರಜತ ಸಂಭ್ರಮದಲ್ಲಿ ಪತ್ನಿಯ ಛಾಯಾಚಿತ್ರ ಜೊತೆ ಆಚರಿಸಿದ ಸಂಭ್ರಮಾಚರಣೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ.
ಕುಂದಾಪುರ ಸಪ್ತಗಿರಿ ಕೋ ಆಪರೇಟಿವ್ ಸೊಸೈಟಿ ಸ್ಥಾಪಕ ಸದ್ಗುರು ಚಂದ್ರಶೇಖರ್ ಇಂತಹದೊಂದು ಸಂಪ್ರದಾಯಕ್ಕೆ ಮುನ್ನುಡಿ ಬರೆದು ಮಾದರಿ ಪತಿ ಎನಿಸಿಕೊಂಡಿದ್ದಾರೆ.
ಕಳೆದು ತಿಂಗಳು ಮೃತ ಪತ್ನಿ ಬೆಳ್ಳಿ ಹಬ್ಬ ಆಚರಣೆ ಹೀಗೆ ಆಚರಣೆ ಮಾಡಬೇಕೆಂಬ ಆಸೆಯನ್ನು ಸಾಯುವ ಮುನ್ನ ತಿಳಿಸಿದ್ದರು.
ಪತ್ನಿಯಷ್ಟೇ ಎತ್ತರದ ಛಾಯಾಚಿತ್ರದ ಪ್ರತಿ ಕೃತಿ ನಿರ್ಮಿಸಿ ಪತ್ನಿಯ ಜೊತೆ ತಮ್ಮಿಬ್ಬರ ಮಕ್ಕಳನ್ನು ನಿಲ್ಲಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾಕ್ಷಿ ಎಂಬಂತೆ ನೂರಾರು ಜನ ಭಾಗಿಯಾಗಿದ್ದು, ಪತ್ನಿಯ ಪ್ರತಿಕೃತಿ ನೈಜ ಎನ್ನುವಂತೆ ಕಂಡು ಬಂದಿದೆ.






