ಕುಂದಾಪುರ:ಮೊಳಹಳ್ಳಿ ವಿವಿಧ ಕರಕುಶಲ ವಸ್ತುಗಳ ತರಬೇತಿ

Views: 118
ಕನ್ನಡ ಕರಾವಳಿ ಸುದ್ದಿ: ವಿಜಯ ಗ್ರಾಮೀಣ ಪ್ರತಿಷ್ಠಾನ (ರಿ.), ಮಂಗಳೂರು ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಗ್ರಾಮ ಪಂಚಾಯತ್ ಮೊಳಹಳ್ಳಿ,ಎನ್ ಆರ್ ಎಲ್ ಎಮ್ ಸಂಜೀವಿನಿ ಒಕ್ಕೂಟದ ಸಹಭಾಗಿತ್ವದಲ್ಲಿ ಒಂದು ವಾರಗಳ ಕಾಲ ವಿವಿಧ ತರಹದ ಕರಕುಶಲ ವಸ್ತುಗಳ ತರಬೇತಿ ಶಿಬಿರ ಮೊಳಹಳ್ಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಮಾರೋಪಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ವಿನೋದ.ಡಿ.ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜ್ಯೋತಿ ರಾಜ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಗ್ರಾಮೀಣ ಪ್ರತಿಷ್ಠಾನ, ಬಿವಿಟಿಯ ರಾಘವೇಂದ್ರ ಆಚಾರ್ಯ ಕೆದೂರು, ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭಾವನಾ, ಮನೋತಜ್ಜರು ಗಿರೀಶ್, ನಮ್ಮ ಭೂಮಿಯ ಗಣೇಶ್, ಎನ್ ಆರ್ ಎಲ್ ಎಮ್ ನ ಚೈತ್ರ ಶುಭಹಾರೈಸಿದರು. ಶಿಬಿರಾರ್ಥಿಗಳು ಅನಿಸಿಕೆ ಹಂಚಿಕೊಂಡರು. ಲಲಿತ ಪ್ರಾರ್ಥಿಸಿ , ಸುಮನ ಶೆಟ್ಟಿ ಸ್ವಾಗತಿಸಿ , ಯಮುನಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮೊಳಹಳ್ಳಿ ಗ್ರಾಮ ಪಂಚಾಯತ್ ಸದಸ್ಯರು,ಎಂಬಿಕೆ , ಎಲ್ ಸಿ ಆರ್ ಪಿ ಪಶುಸಖಿ ಕೃಷಿ ಸಖಿ ಕಾರ್ಯಕ್ರಮಕ್ಕೆ ಸಹಕರಿಸಿದರು.






