ಕುಂದಾಪುರದ ಕಾಂತಾರ ಹೀರೋ ರಿಷಬ್ ಶೆಟ್ಟಿಗೆ ಬಾಲಿವುಡ್ನಿಂದ ಕರೆ! ಹಿಂದಿ ಮೂವಿ ಮಾಡ್ತಾರಾ ರಿಷಬ್?

Views: 0
ಬಾಲಿವುಡ್ ನಲ್ಲಿ ಲಗಾನ್, ಸ್ವದೇಶ್, ಜೋಧ ಅಕ್ಬರ್ ನಂಹ ಕ್ಲಾಸಿಕ್ ಹಿಟ್ ಸಿನಿಮಾಗಳನ್ನ ಕೊಟ್ಟಿರೋ ಆಶುತೋಷ್ ನಿರ್ದೆಶನದಲ್ಲಿ ರಿಷಬ್ ಶೆಟ್ಟರು ಅಭಿನಯಿಸಲಿದ್ದಾರೆ ಅನ್ನೋದು ಬೆಂಗಳೂರು ಟು ಬಾಂಬೆ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.
ಬಾಲಿವುಡ್ ಸಿನಿಮಾದಲ್ಲಿ ರಿಷಬ್? ಕಾಂತಾರ ನಂತರ ರಿಷಬ್ ಶೆಟ್ಟಿಯ ಸ್ಟೇಟಸ್ಸೇ ಬದಲಾಗಿ ಹೋಯ್ತು. ಕನ್ನಡದ ನಟರಾಗಿದ್ದ ರಿಷಬ್ ಒಂದೇ ಒಂದು ಸಿನಿಮಾದಿಂದ ಸ್ಟಾರ್ ನಟ ಆಗಿಬಿಟ್ಟರು. ಅಷ್ಟೇ ಅಲ್ಲದೆ ಹೊರ ರಾಜ್ಯಗಳಿಗೂ ತನ್ನ ಸ್ಟಾರ್ ಸ್ಟೇಟಸ್ ನ ವಿಸ್ತರಿಸಿಕೊಂಡರು. ತಮಿಳು, ತೆಲುಗರು, ಅಷ್ಟೇ ಏಕೆ ಉತ್ತರ ಭಾರತೀಯರು ಸಹ ರಿಷಬ್ಗೆ ಅಭಿಮಾನಿಗಳಾದರೂ ಇನ್ನೂ ಒಂದು ಹೆಜ್ಜೆ ಮುಂದೇ ಹೋಗಿ ಕೆಲವರು ದೇವರಂತೆಯೇ ಆರಾಧಿಸಲು ಶುರು ಮಾಡಿದ್ರು. ಇದೆಲ್ಲದರ ಪರಿಣಾಮ ರಿಷಬ್ ಹೆಸರಿನ ಮುಂದೆ ಡಿವೈನ್ ಸ್ಟಾರ್ ಸೇರಿಕೊಂಡಿತು.
ಸದ್ಯ ಕಾಂತಾರ ಯಶಸ್ಸಿನ ಅಲೆಯಲ್ಲಿಯೇ ಕಾಂತಾರ2 ಮಾಡಲು ರಿಷಬ್ ತಯಾರಿ ನಡೆಸಿದ್ದಾರೆ. ಆಲ್ಮೋಸ್ಟ್ ಕಾಂತಾರ-2 ಚಿತ್ರದ ಸ್ಕ್ರಿಪ್ಟಿಂಗ್ ಕೆಲಸ ಮುಗಿದಿದೆ. ಇನ್ನು ಕೆಲವೇ ವಾರಗಳಲ್ಲಿ ಶೂಟಿಂಗ್ ಸೆಟ್ ಗೆ ರಿಷಬ್ ಅಂಡ್ ಟೀಮ್ ಹೆಜ್ಜೆ ಇಡಲಿದೆ.

ಕಾಂತಾರ-2 ಮೇಲೆ ಮುಗಿಲು ಮುಟ್ಟುವಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಈ ಸಿನಿಮಾ ಯಾವಾಗ ಶುರುವಾಗಿ ಯಾವಾಗ ಬರಲಿದೆ ಎಂಬ ಕಾತುರ, ಆತುರ ಪ್ಯಾನ್ ಇಂಡಿಯಾ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ.
ರಿಷಬ್ ಅಂಡ್ ಟೀಮ್ ಪ್ರಿ ಪ್ರೊಡಕ್ಷನ್ ಗೆ ತುಂಬಾನೆ ಸಮಯ ತೆಗೆದುಕೊಳ್ತಾರೆ. ಆದ್ರೆ ಒಮ್ಮೆ ಶೂಟಿಂಗ್ ಅಡ್ಡಕ್ಕೆ ಜಿಗಿದರೆ ಮುಗೀತು. ಆ ನಂತರದ್ದು ಶರವೇಗದ ಕೆಲಸ. ಯಾವಾಗ ಶುರುವಾಯ್ತು ಅನ್ನೋದು ಕೂಡ ಗೊತ್ತಾಗದಷ್ಟು ಬೇಗ ಶೂಟಿಂಗ್ ಮುಗಿಸಿ, ಥಿಯೇಟರ್ ನತ್ತ ತರೋದ್ರಲ್ಲಿ ಶೆಟ್ಟರ ಬಳಗ ಎಕ್ಸ್ ಪರ್ಟ್.
ಅಂದ್ಹಾಗೆ ಈ ಸಿನಿಮಾವನ್ನ ಪ್ರತಿಷ್ಠಿತ ವಿಬ್ರಿ ಮೋಷನ್ ಪಿಕ್ಚರ್ಸ್ ನಿರ್ಮಾಣ ಮಾಡಲಿದೆ ಎನ್ನಲಾಗ್ತಿದೆ. ವಿಷ್ಣುವರ್ಧನ್ ಇಂದೂರಿ ಒಡೆತನದ ಈ ಬ್ಯಾನರ್ ನಲ್ಲಿ ಸಹ ತಲೈವಿ, 83ನಂತಹ ಬಯೋಪಿಕ್ ಗಳು ಮೂಡಿ ಬಂದಿವೆ. ಇದೀಗ ರಿಷಬ್ ಶೆಟ್ಟಿ ಹಾಗೂ ಆಶುತೋಷ್ ಗೌರಿಕರ್ ನಂತಹ ಕಾಂಬೋವನ್ನ ಒಟ್ಟುಗೂಡಿಸಿ ಮೆಗಾ ಸಿನಿಮಾ ಮಾಡಲು ಪ್ಲ್ಯಾನ್ ಮಾಡಲಾಗಿದೆ ಎಂಬುದು ಈ ಕ್ಷಣದ ಅಪ್ಡೇಟ್ಸ್.
ಕಾಂತಾರ-2 ನಂತರ ಈ ಸಿನಿಮಾ ಅನೌನ್ಸ್ ಆಗಲಿದ್ದು, ರಿಷಭ್ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಮೂಲಗಳ ಮಾಹಿತಿ. ಆದ್ರೆ ಅಫೀಶಿಯಲ್ಲಾಗಿ ರಿಷಬ್ ಶೆಟ್ಟರ ಬಳಗ ಈ ಸುದ್ದಿಯನ್ನ ಇನ್ನೂ ಸಹ ಕಂಫರ್ಮ್ ಮಾಡಿಲ್ಲ.
ಈ ಹಿಂದೆಯೇ ರಿಷಬ್ ಬಾಲಿವುಡ್ ಮೂವಿ ಬಗ್ಗೆ ಟ್ವೀಟ್ ಒಂದು ವೈರಲ್ ಆಗಿತ್ತು. ಆದರೆ ಈಗ ಬಾಲಿವುಡ್ನಿಂದ ರಿಷಬ್ಗೆ ಕರೆಬಂದಿದೆ.!






