ಕಾರ್ಕಳದ ಯುವಕ ಆತ್ಮಹತ್ಯೆ ಪ್ರಕರಣ: ಬರೆದಿಟ್ಟ ಡೆತ್ ನೋಟ್ ನಲ್ಲಿ ಪ್ರೀತಿಸಿದ ಯುವತಿಯ ವಿಚಾರ ಬಯಲು!
Views: 284
ಕನ್ನಡ ಕರಾವಳಿ ಸುದ್ದಿ: ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಯುವಕನೊಬ್ಬ, ತನ್ನ ಖಾಸಗಿ ವಿಡಿಯೋ ಬಳಸಿ ನಾಲ್ವರು ತನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮೃತ ಯುವಕನನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆಯ ಪರಪ್ಪಾಡಿ ನಿವಾಸಿ ಅಭಿಷೇಕ್ ಎಂದು ಗುರುತಿಸಲಾಗಿದೆ.
ಡೆತ್ ನೋಟ್ ನಲ್ಲಿ ತಾನು ಪ್ರೀತಿಸಿದ ಹುಡುಗಿ ನಿರೀಕ್ಷಾ, ಆಕೆ ತಂಡದಲ್ಲಿದ್ದ ಮಂಗಳೂರು ಮೂಲದ ರಾಕೇಶ್ ,ರಾಹುಲ್ ಹಾಗೂ ತಸ್ಲೀಮ್ ಸಾವಿಗೆ ಕಾರಣ ಎಂದು ಬರೆದಿದ್ದಾನೆ. ಅವರು ಹಣಕ್ಕಾಗಿ ತೀವ್ರ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾನೆ. ಅಲ್ಲದೆ ಇವರು ತಂಡವಾಗಿ ಅನೇಕ ಜನರನ್ನು ಅಶ್ಲೀಲ ಫೋಟೋ ಬಳಸಿ ವಂಚಿಸಿದ್ದಾರೆ ಅಂತಲೂ ದೂರಿದ್ದಾನೆ.

ನಿರೀಕ್ಷಾ ನನ್ನನ್ನು ಪ್ರೀತಿಸುವ ನಾಟಕವಾಡಿ ಹತ್ತಿರವಾಗಿದ್ದಳು. ಆಕೆಯನ್ನು ಎರಡು ವರ್ಷಗಳ ಹಿಂದೆ ಬಿಕರ್ನಕಟ್ಟೆಯ ನಮ್ಮ ರೂಮಿಗೆ ಕರೆದೊಯ್ದಿದ್ದೆ. ಆ ಸಂದರ್ಭದಲ್ಲಿ ನನ್ನ ಗೆಳಯನಾಗಿದ್ದ ಉಪ್ಪಿನಂಗಡಿ ಮೂಲದ ತೇಜಕುಮಾರ್, ಆತನ ಗೆಳತಿಯನ್ನು ರೂಮಿಗೆ ಕರೆತಂದಿದ್ದ. ಈ ವೇಳೆ, ನಿರೀಕ್ಷಾಳು ತೇಜಕುಮಾರ್ ಇನ್ನೊಂದು ರೂಮಿನಲ್ಲಿದ್ದಾಗ ಗುಪ್ತ ಕ್ಯಾಮರಾದಲ್ಲಿ ಅಶ್ಲೀಲ ವಿಡಿಯೋ ಮಾಡಿದ್ದಳು. ಆ ವಿಡಿಯೋ ಮುಂದಿಟ್ಟು ತೇಜಕುಮಾರ್ ನಲ್ಲಿ 5 ಲಕ್ಷ ಹಣ ಕೇಳಿದ್ದಳು. ಹಣಕ್ಕಾಗಿ ತೀವ್ರ ಪೀಡಿಸಿದ್ದಳು. ಆದರೆ ನಾನು ನಿರೀಕ್ಷಾಳನ್ನು ಪ್ರೀತಿಸುತ್ತಿದ್ದುದರಿಂದ ಏನೂ ಮಾಡುವಂತಿರಲಿಲ್ಲ. ಆ ಬಳಿಕ 2023ರ ಜೂನ್ ತಿಂಗಳಲ್ಲಿ ತೇಜಕುಮಾರ್ ತನ್ನ ಬೈಕನ್ನು ಬಿಕರ್ನಕಟ್ಟೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದ. ಎಲ್ಲಿ ಹೋಗಿದ್ದಾನೆಂದು ಇನ್ನೂ ಪತ್ತೆಯಾಗಿಲ್ಲ. ಆತನ ತಂದೆ- ತಾಯಿಗೆ ಈ ವಿಷಯ ಹೇಳದೇ ಇದ್ದುದಕ್ಕೆ ವಿಷಾದವಿದ್ದು ಕ್ಷಮೆ ಕೇಳುತ್ತಿದ್ದೇನೆ
ಇವರು ಸಾಯುವ ವರೆಗೂ ನನ್ನನ್ನು ಬಿಡುವುದಿಲ್ಲ ಎಂದು ಗೊತ್ತಾಗಿತ್ತು. ಹಲವು ಸಲ ಸಾಯಲು ಯತ್ನಿಸಿದ್ದೇನೆ. ನನಗೆ ಬದುಕಲು ತುಂಬಾ ಆಸೆ ಇದೆ, ಇವರಿಗೆ ಸಾಲ ಮಾಡಿ ತುಂಬಾ ಸಲ ಹಣ ಕೊಟ್ಟಿದ್ದೇನೆ. ಹಣ ಇಲ್ಲ ಎಂದಾಗ ಬೈಕ್ ಮಾರಾಟ ಮಾಡಿ ಹಣ ಕೊಡುವಂತೆ ಪೀಡಿಸಿದ್ದರು.
ಇವರು ಇನ್ನೊಬ್ಬನಿಗೆ ಇದೇ ರೀತಿ ಆಗಬಾರದು ಎಂದು ಹೇಳಿ ಇವರ ಕೃತ್ಯವನ್ನು ಹೇಳುತ್ತಿದ್ದೇನೆ. ನನ್ನ ತಮ್ಮನನ್ನೂ ಕೊಲ್ಲಲು ನೋಡಿದ್ದಾರೆ, ಇವರಿಗೆ ಒಂದು ಗತಿ ಕಾಣಿಸಬೇಕು ಎಂದೇ ಸಾಯುತ್ತಿದ್ದೇನೆ. ನಾನು ಫ್ಯಾಮಿಲಿಯನ್ನು ತುಂಬ ಮಿಸ್ ಮಾಡುತ್ತಿದ್ದೇನೆ. ಬೇರೆ ಆಫ್ಘನ್ ಇಲ್ಲದೆ ಸಾಯುತ್ತಿದ್ದೇನೆ ಎಂದು ಹೇಳಿ ಸುದೀರ್ಘ ಏಳು ಪುಟಗಳ ಡೆತ್ ನೋಟಲ್ಲಿ ಬರೆದಿದ್ದಾನೆ.






