ಸಾಂಸ್ಕೃತಿಕ

ಕಾಂತಾರ ಚಿತ್ರದಲ್ಲಿ ಅಭಿನಯಿಸಿದ್ದ ನಟ ಪ್ರಭಾಕರ ಕಲ್ಯಾಣಿ ನಿಧನ 

Views: 129

ಕನ್ನಡ ಕರಾವಳಿ ಸುದ್ದಿ: ಕಾಂತಾರ ಚಿತ್ರದಲ್ಲಿ ಅಭಿನಯಿಸಿದ್ದ ಮತ್ತೊಬ್ಬ ನಟ ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಪೆರ್ಡೂರು ಮೂಲದ ಹಿರಿಯ ರಂಗಭೂಮಿ ಕಲಾವಿದ, ನಿವೃತ್ತ ಬ್ಯಾಂಕ್ ಉದ್ಯೋಗಿ ಟಿ. ಪ್ರಭಾಕರ ಕಲ್ಯಾಣಿ ಅವರು  ಹೃದಯಘಾತದಿಂದ ಅಗಸ್ಟ್ 8 ರಂದು ಶುಕ್ರವಾರ ನಿಧನರಾಗಿದ್ದಾರೆ.

ಕಳೆದ 3 ದಿನಗಳ ಹಿಂದೆ ಹಿರಿಯಡಕ ಪೇಟೆಯಲ್ಲಿ ಇವರು ತಲೆ ಸುತ್ತಿ ಬಿದ್ದಿದ್ದರು. ಇಂದು ಮಲಗಿದಲ್ಲಿಯೇ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ.

5 ವರ್ಷದ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಇವರಿಗೆ ಸ್ಟಂಟ್ ಹಾಕಲಾಗಿತ್ತು. ಮೃತರು ಪತ್ನಿ, ಓರ್ವ ಪುತ್ರ, ಅನೇಕ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಬೀಡಿನ ಗುಡ್ಡೆ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇವರು ಕಾಂತಾರ-1 ಚಿತ್ರದಲ್ಲಿ ನ್ಯಾಯವಾದಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬ್ಯಾಂಕ್ ಆಫ್‌ ಬರೋಡಾದ ನಿವೃತ್ತ ಉದ್ಯೋಗಿಯಾದ ಪ್ರಭಾಕರ ಕಲ್ಯಾಣಿ ಅವರು, ರಂಗ ಕಲಾವಿದರಾಗಿ ವಿವಿಧ ನಾಟಕಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡಿದ್ದರು.

Related Articles

Back to top button
error: Content is protected !!