ಧಾರ್ಮಿಕ

ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ಭೇಟಿ 

Views: 320

ಕನ್ನಡ ಕರಾವಳಿ ಸುದ್ದಿ:13ನೇ ಶತಮಾನಕ್ಕೆ ಸೇರಿದ ಬಾರ್ಕೂರು ತುಳುನಾಡಿನ ರಾಜಧಾನಿ 365 ದೇವಸ್ಥಾನಗಳ ನೆಲೆಬೀಡಾಗಿದ್ದು, ಇಲ್ಲಿ ಅನೇಕ ದೇವಾಲಯಗಳು ಭಕ್ತರನ್ನು ಆಕರ್ಷಿಸುತ್ತಿದೆ. ಬಾರ್ಕೂರಿನಲ್ಲಿ ಇಂದಿಗೂ 40 ದೇವಾಲಯಗಳು ಉಳಿದುಕೊಂಡಿದೆ ಇದು ಬಹುತೇಕ ಎಲ್ಲಾ ಸಮುದಾಯಗಳಿಗೆ ನೆಲೆಯಾಗಿದೆ. ಕರಾವಳಿ ಪದ್ಮಶಾಲಿ /ಶೆಟ್ಟಿಗಾರ ಸಮಾಜದವರು ಆರಾಧಿಸಿಕೊಂಡು ಬಂದಿರುವ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಅಕ್ಟೋಬರ್ 16ರಂದು ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ್ ಟಿ ಕೆ ಭೇಟಿ ನೀಡಿ ದೇವಸ್ಥಾನದ ಸಮಗ್ರ ಅಭಿವೃದ್ಧಿಯ ಬಗ್ಗೆ ವೀಕ್ಷಣೆ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. 

ಇತಿಹಾಸ ಪ್ರಸಿದ್ಧ ಬಾರ್ಕೂರಿನ ಎಂಟು ದೇಗುಲಗಳಿಗೆ ಸಂದರ್ಶಿಸಿದ ನಂತರ ಪದ್ಮಶಾಲಿ/ ಶೆಟ್ಟಿಗಾರರ ದೇವಸ್ಥಾನಕ್ಕೆ ಬೇಟಿ ನೀಡಿದ ಮಾನ್ಯ  ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ್ ಟಿ. ಕೆ ಅವರನ್ನು ದೇಗುಲದ ಆಡಳಿತ ಧರ್ಮದರ್ಶಿ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ ಅವರು ದೇವಸ್ಥಾನದ ವತಿಯಿಂದ ಅವರನ್ನು ಗೌರವಿಸಿ, ಅನುಗ್ರಹ ಪ್ರಸಾದ ನೀಡಿದರು. ನಂತರ ಜಿಲ್ಲಾಧಿಕಾರಿ ಅವರು ಮಾತನಾಡಿ, ಮುಖ್ಯಮಂತ್ರಿಗಳ ಆದೇಶದಂತೆ ಬಾರ್ಕೂರು ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ಯೋಜನೆಯ ರೂಪಿಸಲು ಪೂರ್ವ ತಯಾರಿ ಮಾಡಲು ತಿಳಿಸಿರುತ್ತಾರೆ ಎಂದರು. 

ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿಯವರು ವಿವಿಧ ಸಮಿತಿಯ ಅಧ್ಯಕ್ಷರು,ಪದಾಧಿಕಾರಿಗಳು ಉಪಸ್ಥಿತರಿದ್ದರು.

 

Related Articles

Back to top button
error: Content is protected !!