ಸಾಮಾಜಿಕ

ಐಎಎಸ್‌ ಅಧಿಕಾರಿ ಪತಿಯನ್ನು ತೊರೆದು, ಗ್ಯಾಂಗ್‌ಸ್ಟರ್‌ ಜತೆ ಪರಾರಿಯಾದ ಮಹಿಳೆ.. ಪತಿ ಮನೆಗೆ ವಾಪಸಾಗಿ ಆತ್ಮಹತ್ಯೆ!

Views: 209

ಗಾಂಧಿನಗರ: ಗುಜರಾತ್‌ನಲ್ಲಿ ಐಎಎಸ್‌ ಅಧಿಕಾರಿಯಾಗಿದ್ದ  ಪತಿಯನ್ನು ತೊರೆದು, ಗ್ಯಾಂಗ್‌ಸ್ಟರ್‌ ಜತೆ ಪರಾರಿಯಾಗಿದ್ದ ಮಹಿಳೆಯೊಬ್ಬರ ಬಾಳು ಈಗ ದುರಂತ ಅಂತ್ಯ ಕಂಡಿದೆ.

ಗ್ಯಾಂಗ್‌ಸ್ಟರ್‌ನನ್ನು ಬಿಟ್ಟು ಗಂಡನ ಮನೆಗೆ ವಾಪಸ್‌ ಬಂದ 45 ವರ್ಷದ ಮಹಿಳೆಯು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುಜರಾತ್‌ ರಾಜಧಾನಿ ಗಾಂಧಿನಗರದ ಸೆಕ್ಟರ್‌ 19ರಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಸೂರ್ಯ ಜಯ್‌ ಎಂಬ ಮಹಿಳೆಯು 9 ತಿಂಗಳ ಹಿಂದೆ ಗ್ಯಾಂಗ್‌ಸ್ಟರ್‌ ಒಬ್ಬನ ಜತೆ ಪರಾರಿಯಾಗಿದ್ದರು. ಇವರ ಪತಿ ರಂಜೀತ್‌ ಕುಮಾರ್‌ ಅವರು ಗುಜರಾತ್‌ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಯಾಗಿದ್ದಾರೆ. ಐಎಎಸ್‌ ಅಧಿಕಾರಿಯಾಗಿದ್ದ ಪತಿಯನ್ನು ತೊರೆದು, ಅವರು ಗ್ಯಾಂಗ್‌ಸ್ಟರ್‌ ಜತೆ ಓಡಿಹೋಗಿದ್ದರು. ಆದರೆ, ಅವರು ಶನಿವಾರ (ಜುಲೈ 20) ಗಂಡನ ಮನೆಗೆ ವಾಪಸ್‌ ಬಂದವರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದಾದ ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Related Articles

Back to top button
error: Content is protected !!