ಧಾರ್ಮಿಕ

ಎ.1,2 ರಂದು ಬಳ್ಳನೆ ಶ್ರೀ ಚಿತ್ತೇರಿ ಚತುರ್ಮುಖ ಬ್ರಹ್ಮಶಾರದೆ ಪರಿವಾರ ದೇವಸ್ಥಾನದ ಬ್ರಹ್ಮಕಲಶಾಭಿಷೇಕ, ವಾರ್ಷಿಕ ಮಹೋತ್ಸವ

Views: 116

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಅಮಾಸೆಬೈಲು ಬಳ್ಳನೆ ಶ್ರೀ ಚಿತ್ತೇರಿ ಚತುರ್ಮುಖ ಬ್ರಹ್ಮಶಾರದೆ, ಗಣಪತಿ, ನಾಗ, ಹಾಗೂ ದುರ್ಗಾ ಹಾಗೂ ಪರಿವಾರ ದೇವಸ್ಥಾನದ ವಾರ್ಷಿಕ ಮಹೋತ್ಸವ, ಬ್ರಹ್ಮಕಲಶಾಭಿಷೇಕ, ಅಷ್ಟೋತ್ತರ ಶತ ನಾಳಿಕೇರ ಗಣಯಾಗ, ಮೂಡು ಗಣಪತಿ ಸೇವೆ, ಆಶ್ಲೇಷಾ ಬಲಿ, ಚಂಡಿಕಾ ಹೋಮ, ಸಂದರ್ಶನ. ತುಲಾಭಾರ ಸೇವೆ ಹಾಗೂ ಗೆಂಡಸೇವೆ ಎಪ್ರಿಲ್ 1 ಮತ್ತು ಎಪ್ರಿಲ್ 2 ರಂದು ನಡೆಯಲಿದೆ.

ಎಪ್ರಿಲ್ 1ರಂದು ಮಂಗಳವಾರ ಸಂಜೆ ಗಣೇಶ ದೇವರಿಗೆ ಪ್ರಾರ್ಥನೆ, ಮಣ್ಯಾಹವಾಚನ, ಶ್ರೀ ಚಿತ್ತೇರಿ ಚತುರ್ಮುಖ ಬ್ರಹ್ಮಶಾರದೆ ದೇವರಿಗೆ ಕಲಶ ಸ್ಥಾಪನೆ, ಗಣಪತಿ ದುರ್ಗಾ, ನಾಗ ಹಾಗೂ ಪರಿವಾರ ದೇವರುಗಳಿಗೆ ಬ್ರಹ್ಮಕಲಶ ಸ್ಥಾಪನೆ. ಶ್ರೀ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷಾಬಲಿ ಸೇವೆ, ಅನ್ನಸಂತರ್ಪಣೆ ನಡೆಯಲಿದೆ.

ಏಪ್ರಿಲ್ 2ರಂದು ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಗಣೇಶ ಪ್ರಾರ್ಥನೆ ಪುಣ್ಯಾಹವಾಚನ, ಅಷ್ಟೋತ್ತರ ಶತ ನಾಳಿಕೇರ ಗಣಯಾಗ, ಮೂಡು ಗಣಪತಿ ಸೇವೆ, ಚಂಡಿಕಾ ಹೋಮ, ಚತುರ್ಮುಖ ಬ್ರಹ್ಮಶಾರದೆ ದೇವರಿಗೆ ಕಲಾತತ್ವ ಪುರಸ್ಪರ ಪ್ರಧಾನ ಹೋಮ, ಗಣಪತಿ, ದುರ್ಗಾ, ನಾಗ ಹಾಗೂ ಪರಿವಾರ ದೇವರಿಗೆ ಕಲಾತತ್ವ ಪುರಸ್ಪರ ಪ್ರಧಾನ ಹೋಮ, ಬ್ರಹ್ಮಕಲಶಾಭಿಷೇಕ, ಸರ್ವಾಲಂಕಾರ ಮಹಾಪೂಜೆ, ಭಕ್ತಾದಿಗಳ ಸೇವೆ, ತೀರ್ಥಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಯಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಮಧ್ಯಾಹ್ನ 2 ಗಂಟೆಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಜೆ 4.30ರಿಂದ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನ ಕಾರ್ಯಕ್ರಮ, ಕರಾವಳಿ ಕರ್ನಾಟಕದ ಹೆಸರಾಂತ ಗಾಯಕರು ಮತ್ತು ಹಿನ್ನೆಲೆ ವಾದಕರ ಅದ್ದೂರಿ ಹಾಗೂ ಜನಮೆಚ್ಚಿದ ಜನಪದ ಗೀತೆಗಳ ಅದ್ಭುತ ಸಂಗೀತ, ಯಕ್ಷ ನೃತ್ಯ ವೈಭವ ನಡೆಯಲಿದೆ. ರಾತ್ರಿ 7ರಿಂದ ಮಹಾ ಅನ್ನಸಂತರ್ಪಣೆ, ದಾನಿಗಳಿಗೆ ಗೌರವ, ಪ್ರತಿಭಾ ಪುರಸ್ಕಾರ, ರಾತ್ರಿ 8 ಗಂಟೆಗೆ ಖ್ಯಾತ ವಾಗಿ ದಾಮೋದರ ಶರ್ಮ ಬಾರ್ಕೂರು ಇವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ರಾತ್ರಿ 8.30ಕ್ಕೆ ವಿಜಯ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಕಲಾ ಸಂಗಮ ಕಲಾವಿದರಿಂದ ಕನ್ನಡ ನಾಟಕ ‘ಶಿವದೂತ ಗುಳಿಗ’ ಪ್ರದರ್ಶನಗೊಳ್ಳಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

Related Articles

Back to top button