ಉಪ್ಪುಂದ: ಮದುವೆ ಹಿಂದಿನ ದಿನ ಮದುಮಗ ನಾಪತ್ತೆ, ರದ್ದಾದ ಮದುವೆ

Views: 391
ಉಪ್ಪುಂದ: ಮದುವೆ ನಿಶ್ಚಯಗೊಂಡ ಮದುಮಗ ಮದುವೆ ಹಿಂದಿನ ದಿನ ನಾಪತ್ತೆಯಾದ ಕಾರಣ ಮದುವೆ ರದ್ದಾದ ಘಟನೆ ಉಪ್ಪುಂದದಲ್ಲಿ ನಡೆದಿದೆ.
ಇಲ್ಲಿನ ಅಳಿವೆಕೋಡಿ ಗ್ರಾಮದ ವ್ಯಕ್ತಿಯೊಂದಿಗೆ ಉಪ್ಪಂದ ಗ್ರಾಮದ ಯುವತಿಯ ಜೊತೆ ಈ ಹಿಂದೆ ಎರಡು ಕಡೆಯವರು ಸೇರಿ ಮದುವೆ ನಿಶ್ಚಯಿಸಿದ್ದಾರೆ. ಸೋಮವಾರ ಅ.19ರಂದು ನಾಗೂರಿನಲ್ಲಿ ಮದುವೆ ನಡೆಯಬೇಕಿತ್ತು.
ಅಗಸ್ಟ್ 18ರಂದು ಹುಡುಗನ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದ್ದಾರೆ ಮದುಮಗ ಸೋಮವಾರ ನಡೆಯಲಿರುವ ಮದುವೆಗೆ ಬೇಕಾಗಿರುವ ಚಿನ್ನಾಭರಣಗಳನ್ನು ಖರೀದಿ ಮಾಡಿದ್ದಾನೆ. ಚಿನ್ನಾಭರಣಗಳನ್ನು ಮನೆಯಲ್ಲಿಟ್ಟು ಇನ್ನೂ ಕೆಲವು ವಸ್ತುಗಳನ್ನು ತರಲು ಬಾಕಿ ಇದೆ ಎಂದು ಮನೆಯವರಲ್ಲಿ ಹೇಳಿ ಮೊಬೈಲ್, ಕೈಗೆ ಹಾಕಿಕೊಂಡ ಚಿನ್ನದ ಬ್ರಾಸ್ಲೈಟ್ ಅನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದಾನೆ
ಮೆಹಂದಿಯ ಸಂಭ್ರಮದಲ್ಲಿದ್ದ ಮನೆಯವರು ಹುಡುಗ ಮನೆಗೆ ಬಾರದೆ ಇರುವುದರಿಂದ ಗಾಬರಿಯಿಂದ ಹುಡುಕಾಟದಲ್ಲಿ ತೊಡಗಿದರು. ಬಳಿಕ ಹುಡುಗ ನಾಪತ್ತೆ ವಿಷಯ ತಿಳಿದು ನೆರೆದವರೆಲ್ಲರೂ ವಾಪಾಸು ತೆರಳಿದ್ದಾರೆ. ಹುಡುಗ ಶಾಂತ ಸ್ವಭಾವನಾಗಿದ್ದು ಸ್ವಲ್ಪ ಮಾನಸಿಕ ಸಮಸ್ಯೆ ಇರುವುದಾಗಿ ಹುಡುಗನ ಗೆಳೆಯರಿಂದ ತಿಳಿದುಬಂದಿದೆ.






