ಧಾರ್ಮಿಕ

ಉತ್ಖನನ ವೇಳೆ ಚಿಕ್ಕೋಡಿಯಲ್ಲಿ ಶ್ರೀರಾಮ ಮಂದಿರ ಪತ್ತೆ

Views: 29

ಚಿಕ್ಕೋಡಿ:  ಅಯೋಧ್ಯೆಯಲ್ಲಿ  ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಡಗರದಲ್ಲಿರುವಾಗಲೇ. ಇತ್ತ ಚಿಕ್ಕೋಡಿಯಲ್ಲಿ ಭೂಮಿಯ ಒಡಲಾಳದಲ್ಲಿ ಹುದುಗಿದ್ದ  ಶ್ರೀರಾಮನ ಮಂದಿರ ಗೋಚರವಾಗಿದ್ದು ಸ್ಥಳೀಯ ಭಕ್ತರು ಸಂತಸಪಟ್ಟಿದ್ದಾರೆ.

ನೂರಾರು ವರ್ಷಗಳ ಹಿಂದೆ ಹುದಗಿ ಹೋಗಿದ್ದ ಶ್ರೀರಾಮ ದೇವಸ್ಥಾನವಿದು. ಇದು ಮರ್ಯಾದಾ ಪುರುಷೋತ್ತಮನ ಲೀಲೆಯಲ್ಲದೇ ಮತ್ತೇನೂ ಅಲ್ಲ ಎನ್ನುತ್ತಿದ್ದಾರೆ  ಶ್ರೀರಾಮ ಭಕ್ತರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಈ ಮಂದಿರ ಗೋಚರವಾಗಿದ್ದು, ಸದಲಗಾ ಪಟ್ಟಣದ ಹೊರವಲಯದ ದೂಧಗಂಗಾ ನದಿ ಬಳಿಯ ಪ್ಯಾಟೆ ಹೊಳೆ ಬಳಿ ಪತ್ತೆಯಾಗಿದೆ.

ಸದಲಗಾ ಪಟ್ಟಣದ ಹಿಂದೂ ಸಮುದಾಯದಿಂದ ಉತ್ಖನನ ಕಾರ್ಯ ನಡೆದಿದ್ದು, ನಮ್ಮ ಹಿರಿಯರು ಇಲ್ಲಿ  ಶ್ರೀರಾಮ ಮಂದಿರ ಇದೆ ಎಂದು ಹೇಳ್ತಿದ್ರು ಅದು ನಿಜವಾಗಿದೆ. ಅತಿವೃಷ್ಟಿಯಂತಹ ಸಂದರ್ಭದಲ್ಲಿ  ಶ್ರೀರಾಮರ ಮಂದಿರ ನೆಲದಾಳದಲ್ಲಿ ಮುಚ್ಚಿ ಹೋಗಿದೆ ಎಂದು ಹೇಳ್ತಿದ್ರು. ಹೀಗಾಗಿ ಜೆಸಿಬಿ ಯಂತ್ರಗಳನ್ನು ಬಳಸಿ ದೇವಸ್ಥಾನದ ಇದ್ದ ಸ್ಥಳದಲ್ಲಿ ಉತ್ಖನನ ಮಾಡಿದೆವು ಎನ್ನುತ್ತಾರೆ ಸ್ಥಳೀಯರು.

Related Articles

Back to top button
error: Content is protected !!