ಇತರೆ
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ಮುಗ್ಗರಿಸಿ ಬಿದ್ದ ಪ್ರಯಾಣಿಕನನ್ನು ರಕ್ಷಿಸಿದ ಪೊಲೀಸ್!
Views: 70
ಕನ್ನಡ ಕರಾವಳಿ ಸುದ್ದಿ: ಉಡುಪಿಯ ಕೊಂಕಣ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ಮುಗ್ಗರಿಸಿ ಬಿದ್ದ ಪ್ರಯಾಣಿ ಕರೊಬ್ಬರನ್ನು ತಕ್ಷಣವೇ ಸ್ಪಂಧಿಸಿದ ರೈಲ್ವೆ ಪೊಲೀಸ್ ಪಡೆಯ ಸಿಬ್ಬಂದಿಯೊಬ್ಬರು ರಕ್ಷಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ತಿರುವನಂತಪುರದಿಂದ ಹೊಸದಿಲ್ಲಿಗೆ ತೆರಳುತಿದ್ದ ಅಮೃತಸರ ಎಕ್ಸ್‌ಪ್ರೆಸ್ ರೈಲು ಉಡುಪಿ ನಿಲ್ದಾಣ ಪ್ರವೇಶಿಸುತಿದ್ದಂತೆ ಅದರಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕರೊಬ್ಬರು ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ಮುಗ್ಗರಿಸಿ ಬಿದ್ದಿದ್ದರು. ಅಲ್ಲೇ ಸಮೀಪದಲ್ಲಿ ಕರ್ತವ್ಯದಲ್ಲಿದ್ದ ರೈಲ್ವೆ ಪೊಲೀಸ್ ಎಎಸ್‌ಐ ಸಾಜು ಯು. ತಕ್ಷಣ ಧಾವಿಸಿ ಬಂದು ಆತನನ್ನು ಹಳಿಗೆ ಬೀಳದಂತೆ ತಡೆದು ರಕ್ಷಿಸಿದ್ದರು.ಇಡೀ ಘಟನೆ ನಿಲ್ದಾಣದ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.






