ಯುವಜನ
ಉಡುಪಿ:ಪಿಯುಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Views: 224
ಉಡುಪಿ: ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ನಗರದ ಅಜ್ಜರಕಾಡು ಎಂಬಲ್ಲಿ ನಡೆದಿದೆ.
ಅಜ್ಜರಕಾಡು ನಿವಾಸಿ ಸರಿಟ ವೇಗಸ್ ಹಾಗೂ ಮನೋಹರ್ ವೇಗಸ್ ದಂಪತಿ ಪುತ್ರ ತುಷಾರ್ ವೇಗಾಸ್ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ತುಷಾರ್ ಶುಕ್ರವಾರ ಕಾಲೇಜಿನಿಂದ ಮನೆಗೆ ಮಧ್ಯಾಹ್ನ 3.30ರ ಸುಮಾರಿಗೆ ಆಗಮಿಸಿ ಮಲಗುತ್ತೇನೆ ಎಂದು ತಾಯಿಯಲ್ಲಿ ತಿಳಿಸಿ ರೂಮಿಗೆ ತೆರಳಿದ್ದ. ಸುಮಾರು 4 ಗಂಟೆ ಹೊತ್ತಿಗೆ ಏನೋ ಅನುಮಾನ ಬಂದು ಬಾಗಿಲು ಬಡಿದಾಗ ಒಳಗಿನಿಂದ ಚಿಲಕ ಹಾಕಲಾಗಿತ್ತು. ಕೂಡಲೇ ನೆರೆಕರೆಯವರ ಸಹಾಯದಿಂದ ಬಾಗಿಲನ್ನು ಒಡೆದು ನೋಡಿದಾಗ, ಆತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






