ಸಾಮಾಜಿಕ

ಇನ್‌ಸ್ಟಾಗ್ರಾಮ್ ಪ್ರೀತಿ:ಅದ್ದೂರಿ ಮದುವೆ ಸಿದ್ಧತೆ, ಕೊನೆ ಕ್ಷಣದಲ್ಲಿ ವಧು ಮಂಟಪಕ್ಕೆ ಬರಲೇ ಇಲ್ಲ!

Views: 120

ಕನ್ನಡ ಕರಾವಳಿ ಸುದ್ದಿ:  ಇನ್‌ಸ್ಟಾಗ್ರಾಮ್ ಪ್ರೀತಿ, ಫೋನ್‌ನಲ್ಲಿ ನಿಶ್ಚಯವಾದ ಮದುವೆ, ಅದ್ದೂರಿ ಸಿದ್ಧತೆ, ಮತ್ತು ಕೊನೆಯ ಕ್ಷಣದಲ್ಲಿ ವಧುವಿನ ನಿರಾಕರಣೆ. ಇದು ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲೆಯ ಯುವಕನೊಬ್ಬನಿಗೆ ಡಿಸೆಂಬರ್ 2 ರಂದು ನಡೆದ ಕಟು ಅನುಭವ, ಬದ್ಗಾಂವ್ ಪ್ರದೇಶದ ಗ್ರಾಮದ ಈ ಯುವಕನ ನೋವಿನ ಕಥೆ ಈಗ ಜಿಲ್ಲೆಯಾದ್ಯಂತ ಚರ್ಚೆಯ ವಿಷಯವಾಗಿದೆ.

ಯುವಕನು ಬರೇಲಿಯ ಯುವತಿಯೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯ ಬೆಳೆಸಿಕೊಂಡಿದ್ದ. ಈ ಆನ್‌ಲೈನ್ ಸ್ನೇಹ ಕೆಲವೇ ದಿನಗಳಲ್ಲಿ ಪ್ರೇಮಕ್ಕೆ ತಿರುಗಿ, ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಡಿಸೆಂಬರ್ 2ಕ್ಕೆ ಮದುವೆ ದಿನಾಂಕವೂ ನಿಗದಿಯಾಗಿತ್ತು.

ಯುವಕನ ಮನೆಯಲ್ಲಿ ಮದುವೆಯ ಸಂಭ್ರಮ ಮುಗಿಲು ಮುಟ್ಟಿತ್ತು. ಅರಿಶಿನ ಶಾಸ್ತ್ರ ಎಣ್ಣೆ ಶಾಸ್ತ್ರಗಳೆಲ್ಲಾ ಸಾಂಪ್ರದಾಯಿಕವಾಗಿ ನಡೆದುವು. ಬಂಧು ಮಿತ್ರರು ಆಗಮಿಸಿ ಮನೆ ತುಂಬಿತ್ತು. ಪೇಟ ಕಟ್ಟಿ, ವರನಾದ ಯುವಕನು ಬ್ಯಾಂಡ್‌ಸೆಟ್‌ನೊಂದಿಗೆ ಕುದುರೆಯ ಮೇಲೆ ಸವಾರಿ ಮಾಡಿ, ಸುಮಾರು 350 ಕಿ.ಮೀ. ದೂರದಲ್ಲಿರುವ ಮದುವೆ ಮಂಟಪಕ್ಕೆ ಮೆರವಣಿಗೆಯಲ್ಲಿ ತೆರಳಿದ.

ಆದರೆ, ಮಂಟಪದಲ್ಲಿ ಕಾಯುತ್ತಿದ್ದ ವರನಿಗೆ ನಿರಾಶೆ ಕಾದಿತ್ತು. ವಧು ಮಂಟಪಕ್ಕೆ ಬರಲೇ ಇಲ್ಲ! ಆತ ಫೋನ್ ಮಾಡಿದರೆ, ವಧು ಕರೆ ಕಟ್ ಮಾಡಿದಳು. ಮತ್ತೆ ಪ್ರಯತ್ನಿಸಿದಾಗ ಫೋನ್ ಸ್ವಿಚ್ ಆಫ್ ಆಯಿತು. ಹಲವಾರು ಗಂಟೆಗಳ ಕಾಯುವಿಕೆಯ ನಂತರವೂ ವಧುವಿನ ಕಡೆಯಿಂದ ಯಾವುದೇ ಸ್ಪಂದನೆ ಸಿಗಲಿಲ್ಲ. ಇದರಿಂದಾಗಿ ತೀವ್ರ ಆಘಾತಕ್ಕೊಳಗಾದ ವರನು ಮದುವೆ ಮೆರವಣಿಗೆಯೊಂದಿಗೆ ಬರಿಗೈಯಲ್ಲಿ ವಾಪಸ್ ಬರಬೇಕಾಯಿತು.

ಈ ಘಟನೆ ನಡೆಯುವುದಕ್ಕೆ ಕೇವಲ 5 ದಿನಗಳ ಮೊದಲು, ವಧು ಆತನಿಗೆ ವರದಕ್ಷಿಣೆಯ ರೂಪದಲ್ಲಿ ಕಾರು ಕೊಡಿಸುವುದಾಗಿ ಭರವಸೆ ನೀಡಿದ್ದಳು. ಈ ಭರವಸೆಯ ಮೇರೆಗೆ, ವರನು ತನ್ನ ಸ್ನೇಹಿತರೊಂದಿಗೆ ಸಹಾರನ್‌ಪುರದ ಶೋರೂಂಗೆ ಹೋಗಿ ಬ್ರೆಝಾ ಕಾರನ್ನು ಆಯ್ಕೆ ಮಾಡಿದ್ದ. ಕಾರು ಸಿಗುವ ಆಸೆಯಲ್ಲಿ ಆತ ವಧುವಿನ ಮಾತನ್ನು ನಂಬಿದ್ದನು. ದುರದೃಷ್ಟವಶಾತ್, ಆತನಿಗೆ ಕಾರು ಸಿಕ್ಕರೂ, ಕೈಹಿಡಿಯುವ ವಧು ಸಿಗಲಿಲ್ಲ. ಈ ಮೋಸದಿಂದಾಗಿ ಯುವಕನು ಆಘಾತಕ್ಕೊಳಗಾಗಿದ್ದು, ಆತನ ಕುಟುಂಬ ಕೂಡ ತೀವ್ರ ನೋವಿನಲ್ಲಿದೆ.

Related Articles

Back to top button