ಯುವಜನ
ಆಯತಪ್ಪಿ ರಸ್ತೆಗೆ ಬಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಕಾರು ಹರಿದು ಸಾವು

Views: 122
ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನಲ್ಲಿ ನಡೆದ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ. ದೇವತಾ (24) ಸ್ಥಳದಲ್ಲೇ ಮೃತಪಟ್ಟ ವಿದ್ಯಾರ್ಥಿನಿ.
ವಿದ್ಯಾರ್ಥಿನಿ ದೇವತಾ ಸ್ಕೂಟರ್ನಲ್ಲಿ ಬರುತ್ತಿದ್ದಾಗ ಆಯತಪ್ಪಿ ರಸ್ತೆಗೆ ಬಿದ್ದಿದ್ದಾಳೆ. ಇದೇ ವೇಳೆ ಎದುರಿನಿಂದ ಬಂದ ಕಾರು ಆಕೆಯ ಮೇಲೆ ಹರಿದು ಹೋಗಿದೆ. ಪರಿಣಾಮ ವಿದ್ಯಾರ್ಥಿನಿ ಧರಿಸಿದ್ದ ಹೆಲ್ಮೆಟ್ ಬೇರ್ಪಟ್ಟಿದ್ದರಿಂದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಎದುರುಗಡೆ ಬ್ಯಾನರ್ ಇರೋದರಿಂದ ಕಾರು ಚಾಲಕ ಸ್ವಲ್ಪ ಬಲಕ್ಕೆ ಬಂದಿದ್ದಾನೆ. ಇದರಿಂದ ದ್ಚಿಚಕ್ರದಲ್ಲಿ ಹೋಗ್ತಿದ್ದ ವಿದ್ಯಾರ್ಥಿನಿ ಆಯತಪ್ಪಿದ್ಲು, ಇದರಿಂದಲೇ ಆ್ಯಕ್ಸಿಡೆಂಟ್ ನಡೆಯಿತು ಅನ್ನೋದು ಕುಟುಂಬಸ್ಥರ ಮಾತಾಗಿದೆ. ಆದ್ರೆ ಸಿಸಿಟಿವಿಯಲ್ಲಿ ವಿದ್ಯಾರ್ಥಿನಿ ಆಯತಪ್ಪಿ ಬೀಳ್ತಿರೋದು ಸೆರೆಯಾಗಿದೆ. ಇನ್ನೂ, ತಮಗಿದ್ದ ಒಬ್ಬಳೇ ಮಗಳನ್ನು ಕಳೆದುಕೊಂಡು ಪೋಷರು ಕಣ್ಣೀರು ಹಾಕುತ್ತಿದ್ದಾರೆ.






