ಮಾಹಿತಿ ತಂತ್ರಜ್ಞಾನ

ಅ.23 ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ವಿಕ್ರಂ ಲ್ಯಾಂಡರ್ ಇಳಿದ ಸ್ಥಳ ‘ಶಿವಶಕ್ತಿ ಪಾಯಿಂಟ್’: ಪ್ರಧಾನಿ ಘೋಷಣೆ

Views: 1

ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ -3 ಯಶಸ್ವಿಯಾದ ಆಗಸ್ಟ್ 23ನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ ‘ವಾಗಿ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ವಿಕ್ರಂ ಲ್ಯಾಂಡರ್ ಇಳಿದ ಚಂದ್ರನ ದಕ್ಷಿಣ ಧ್ರುವದ ತಾಣವನ್ನು’ ಶಿವಶಕ್ತಿ ಪಾಯಿಂಟ್’ ಎಂಬ ಹೆಸರಿನಿಂದ ಗುರುತಿಸುವುದಾಗಿ ಹೇಳಿದ್ದಾರೆ.

ಹಾಗೆಯೇ 2019ರ ಚಂದ್ರಯಾನ- 2 ವಿಫಲವಾಗಿದ್ದರೂ ಲ್ಯಾಂಡರ್ ವಿಕ್ರಂ ಅಪ್ಪಳಿಸುವ ಸ್ಥಳಕ್ಕೆ ‘ತಿರಂಗ ಪಾಯಿಂಟ್ ‘ಎಂದು ನಾಮಕರಣ ಮಾಡಿರುವುದು ವಿಶೇಷ.

ಆಸ್ಟ್ರೇಲಿಯಾ, ಗ್ರೀಸ್ ಪ್ರವಾಸದಿಂದ ನೇರವಾಗಿ ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಇಸ್ರೋ ಕಮಾಂಡಿಂಗ್ ಸೆಂಟರ್ ನಲ್ಲಿ ಚಂದ್ರಯಾನ -3 ಯಶಸ್ಸಿಗೆ ದುಡಿದ ವಿಜ್ಞಾನಿಗಳನ್ನು ಭೇಟಿ ನೀಡಿ ಅಭಿನಂದಿಸಿದ ಬಳಿಕ ಈ ಮಹತ್ವದ ಘೋಷಣೆ ಮಾಡಿದ್ದಾರೆ.

ಚಂದ್ರಯಾನ- 3ಯಶಸ್ಸಿನ ನೆನಪಿಗಾಗಿ ಕೇಂದ್ರ ಸರಕಾರದ ವೆಬ್ಸೈಟ್ ನಲ್ಲಿ ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಸೆಪ್ಟೆಂಬರ್ 1 ರಿಂದ ಆಯೋಜಿಸಲಾಗಿಯೂ ಹೇಳಿದ್ದಾರೆ.

ಜೀವನಮಟ್ಟ ಸುಧಾರಣೆ, ಹಾಗೂ ಸುಲಲಿತ ಆಡಳಿತದಲ್ಲಿ ಬಾಹ್ಯಾಕಾಶ ವಿಜ್ಞಾನದ ಬಳಕೆ ಕುರಿತು ರಾಷ್ಟ್ರ ಮಟ್ಟದ ಹ್ಯಾಕ್ ಥಾನ್ ಆಯೋಜಿಸುವಂತೆ ಸಲಹೆ ನೀಡಿದ್ದಲ್ಲದೆ ಆರೋಗ್ಯ, ಶಿಕ್ಷಣ, ಟೆಲಿ ಮೆಡಿಸಿನ್, ಹವಾಮಾನ ಮುನ್ಸೂಚನೆ ಸೇರಿದಂತೆ ನಾನಾ ಕ್ಷೇತ್ರಗಳನ್ನು ಬಾಹ್ಯಾಕಾಶ ವಿಜ್ಞಾನದ ಬಳಕೆಗೆ ಇರುವ ಅವಕಾಶಗಳ ಕುರಿತು ಸಂಶೋಧನೆಗೆ ಯುವಜನರಿಗೆ ಪ್ರೇರಣೆಯನ್ನು ನೀಡಲು ಈ ಹ್ಯಾಕ್ ಥಾನ್ ವೇದಿಕೆಯಾಗಲಿ ಎಂದು ಆಶಿಸಿದರು.

ಜಾಗತಿಕ ಮಟ್ಟದಲ್ಲಿ ಬಾಹ್ಯಾಕಾಶ ವಹಿವಾಟು ವಿಸ್ತರಣೆಗೆ ನಮ್ಮ ಯುವಕರು ಸಜ್ಜಾಗುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸ್ಟಾರ್ಟ್ ಆಫ್ ಗಳ ಸಂಖ್ಯೆ 4 ರಿಂದ 15 ಕ್ಕೆ ಏರಿದೆ. ಅಂತ್ಯವಿಲ್ಲದ ಆಕಾಶದಲ್ಲಿ ಭಾರತಕ್ಕಾಗಿ ಕಾಯುತ್ತಿರುವ ಅಂತ್ಯವಿಲ್ಲದ ಸಾಧ್ಯತೆಗಳನ್ನು ನಾವು ಊಹಿಸಬಹುದು ಎಂದು ಪ್ರಧಾನಿ ಹೇಳಿದರು.

ಶಿವಶಕ್ತಿ ಪಾಯಿಂಟ್’ ನಾಮಕರಣ

‘ಶಿವ’ಎಂದರೆ ಮನುಕುಲದ ಕಲ್ಯಾಣಕ್ಕಾಗಿ ನಿರ್ಣಯಗಳನ್ನು ಕೈಗೊಳ್ಳುವುದು.

‘ಶಕ್ತಿ’ ಎಂದರೆ ಆ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲು ಬೇಕಾದ ಬಲ ಎಂದರ್ಥ ‘ಶಿವ ಶಕ್ತಿ ಪಾಯಿಂಟ್’ ಹಿಮಾಲಯದಿಂದ ಕನ್ಯಾಕುಮಾರಿ ವರೆಗಿನ ಪ್ರದೇಶಗಳನ್ನು ಜೋಡಿಸಲಾಗಿದೆ ಎಂದರ್ಥ.

Related Articles

Back to top button