ಅಯೋಧ್ಯೆ ರಾಮಜನ್ಮಭೂಮಿಗಾಗಿ ಹೋರಾಟ ನಡೆಸಿದ ಕರಸೇವಕ ಜೈಲಿನಿಂದ ಬಿಡುಗಡೆ, ಅದ್ಧೂರಿ ಸ್ವಾಗತ

Views: 62
ಹುಬ್ಬಳ್ಳಿ: ಅಯೋಧ್ಯೆ ರಾಮಜನ್ಮಭೂಮಿಗಾಗಿ ಹೋರಾಟ ನಡೆಸಿದ ಕರಸೇವಕ ಶ್ರೀಕಾಂತ ಪೂಜಾರಿ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ನಿನ್ನೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯ ಉಪಕಾರಾಗೃಹದಿಂದ ಶ್ರೀಕಾಂತ ಪೂಜಾರಿ ಬಿಡುಗಡೆ ಆಗಿದ್ದಾರೆ. ಈ ವೇಳೆ ಹಿಂದೂಪರ ಸಂಘಟನೆಯ ನಾಯಕರು, ಬೆಂಬಲಿಗರು ಕಾರಾಗೃಹದ ಎದುರು ಪಟಾಕಿ ಸಿಡಿಸಿ ಭರ್ಜರಿ ಸಂಭ್ರಮಾಚರಣೆ ಮಾಡಿದ್ದಾರೆ.

31 ವರ್ಷಗಳ ಹಳೆಯ ಪ್ರಕರಣ ರೀ ಓಪನ್ ಮಾಡಿದ್ದ ಹುಬ್ಬಳ್ಳಿ ಪೊಲೀಸರು ಶ್ರೀಕಾಂತ ಪೂಜಾರಿ ಅವರನ್ನು ಬಂಧಿಸಿದ್ದರು. ಕರಸೇವಕನ ಬಂಧನಕ್ಕೆ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ನಾನು ಕರಸೇವಕ, ನನ್ನನ್ನು ಬಂಧಿಸಿ ಅನ್ನೋ ಅಭಿಯಾನವನ್ನು ನಡೆಸಿದ್ದರು.
ನಿನ್ನೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಶ್ರೀಕಾಂತ ಪೂಜಾರಿ ಅವರು ಇಂದು ಬಿಡುಗಡೆಯಾಗಿದ್ದಾರೆ. ಕಾರಾಗೃಹದಿಂದ ಹೊರ ಬರುತ್ತಿದ್ದಂತೆ ಶ್ರೀಕಾಂತ ಪೂಜಾರಿ ಅವರಿಗೆ ಪುಷ್ಪವೃಷ್ಟಿ ಮಾಡಿ ಕುಟುಂಬಸ್ಥರು ಬರಮಾಡಿಕೊಂಡರು. ಆರತಿ ಬೆಳಗಿ, ಸಿಹಿ ತಿನಿಸಿ ಶ್ರೀಕಾಂತ ಅವರಿಗೆ ಸ್ವಾಗತ ಕೋರಲಾಗಿದೆ.






