ರಾಜಕೀಯ

ಅತ್ಯಾಚಾರದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೈಲಿನಲ್ಲಿ ಸಂಬಳ ಎಷ್ಟು ಗೊತ್ತಾ?

Views: 208

ಕನ್ನಡ ಕರಾವಳಿ ಸುದ್ದಿ: ರೇಪ್ ಕೇಸ್ ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣಗೆ ಸದ್ಯದಲ್ಲೇ ಜೈಲಿನಲ್ಲಿ ಕೆಲಸ ಹಂಚಿಕೆಯಾಗಲಿದೆ. ಪ್ರಜ್ವಲ್ ವಿದ್ಯಾಭ್ಯಾಸದ ಮೇಲೂ ಕೆಲಸ ಹಂಚಿಕೆಯಾಗಬಹುದು. ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಈಗ ದಿನಗೂಲಿ ಪಡೆಯಬೇಕಾಗಿದೆ.

ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ಗೆ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ನೀಡಿದೆ. ಪ್ರಜ್ವಲ್ ರೇವಣ್ಣಗೆ ಜೈಲ್ಲಿ‌ನಲ್ಲಿ ಏನು ಕೆಲಸ ಕೊಡಬೇಕು ಎಂಬುದರ ಬಗ್ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ಆರಂಭವಾಗಿದೆ. ಶೀಘ್ರದಲ್ಲೇ ಪ್ರಜ್ವಲ್ ರೇವಣ್ಣಗೆ ಜೈಲ್ಲಿನಲ್ಲಿ ಕೆಲಸವನ್ನು ನೀಡಲಿದ್ದಾರೆ.

ಸದ್ಯ ಪ್ರಜ್ವಲ್ ವಿದ್ಯಾಭ್ಯಾಸ ಮೇಲೆ ಕೆಲಸ ನೀಡಲು ಚಿಂತನೆ ನಡೆದಿದೆ. ಅಪರಾಧಿ ಪ್ರಜ್ವಲ್ ಬಿ.ಇ. ಮೆಕಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ. ವ್ಯಾಸಂಗಕ್ಕೆ ಹೊಂದಿಕೊಳ್ಳುವ ಕೆಲಸ ನೀಡಲು ಜೈಲು ಅಧಿಕಾರಿಗಳ ಪ್ಲ್ಯಾನ್ ಮಾಡಿದ್ದಾರೆ. ಸಜಾಬಂಧಿ ಖೈದಿಗಳು ಕಡ್ಡಾಯವಾಗಿ ಜೈಲ್ಲಿ‌ನಲ್ಲಿರುವ ಯಾವುದಾದರೊಂದು ಕೆಲಸ ಮಾಡಬೇಕು. ಜೈಲಿನಲ್ಲಿ ಬೇಕರಿ, ತೋಟಗಾರಿಕೆ, ಗ್ರಂಥಾಲಯ ನಿರ್ವಹಣೆ, ಶಿಕ್ಷಣ, ಮಗ್ಗ, ಸಣ್ಣ ಪುಟ್ಟ ಕೈಗಾರಿಕೆ ಕೆಲಸ , ಅಡುಗೆ ಮನೆ ನಿರ್ವಹಣೆ, ಅಡ್ಮಿನಿಸ್ಟ್ರೇಶನ್ ನೋಡಿಕೊಳ್ಳುವುದು, ಸ್ಕಿಲ್ ಡೆವಲಪ್ಮೆಂಟ್ ಮುಂತಾದ ಕೆಲಸಗಳು ಇವೆ . ಪ್ರಜ್ವಲ್ ಗೆ ಜೈಲಿನಲ್ಲಿ ಮಾಡಿದ ಕೆಲಸಕ್ಕೆ ದಿನಕ್ಕೆ 540 ರೂಪಾಯಿ ಕೂಲಿ ಸಿಗಲಿದೆ. ಒಂದು ವರ್ಷ ಆದ ನಂತರ 615 ರೂಪಾಯಿ ಕೂಲಿ ನಿಗದಿಯಾಗಲಿದೆ.

ಜೈಲಿನ ಹೊರಗೆ ಹತ್ತಾರು ಜನಕ್ಕೆ ತನ್ನ ತೋಟದಲ್ಲೇ ಪ್ರಜ್ವಲ್ ರೇವಣ್ಣ ಕೆಲಸ ಕೊಟ್ಟಿದ್ದ. ಇಡೀ ಲೋಕಸಭಾ ಕ್ಷೇತ್ರಕ್ಕೆ ಎಂಪಿಯಾಗಿದ್ದ. ಪ್ರಜ್ವಲ್ ಗೆ ಜೈಲು ಹೊರಗೆ ಎಲ್ಲದ್ದಕ್ಕೂ ಅಳುಗಳು ಇದ್ದರು. ಆದರೇ, ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣನೇ ಕೂಲಿ ಕೆಲಸ ಮಾಡಿ, ನಿತ್ಯದ ಕೂಲಿಯಾಗಿ 540 ರೂಪಾಯಿ ಹಣವನ್ನು ಪಡೆಯಬೇಕಾದ ಸ್ಥಿತಿ ಬಂದಿದೆ.

.

Related Articles

Back to top button