ಕೃಷಿ
ಅಡಿಕೆ ಮರಕ್ಕೆ ಮದ್ದು ಸಿಂಪಡಣೆ ವೇಳೆ ವಿದ್ಯುತ್ ಶಾಕ್ ಹೊಡೆದು ಕಾರ್ಮಿಕ ಸಾವು

Views: 91
ಕನ್ನಡ ಕರಾವಳಿ ಸುದ್ದಿ: ಅಡಿಕೆ ಮರಕ್ಕೆ ಮದ್ದು ಸಿಂಪಡಣೆ ವೇಳೆ ವಿದ್ಯುತ್ ಶಾಕ್ ಹೊಡೆದು ಕಾರ್ಮಿಕ ಸಾವನ್ನಪ್ಪಿದ ಘಟನೆ ಕೊಕ್ಕಡ ಅರಸಿನ ಮಕ್ಕಿ ಬಳಿಯ ಎಂಜಿರ ಎಂಬಲ್ಲಿ ನಡೆದಿದೆ.
ತೋಟವೊಂದರಲ್ಲಿ ಅಡಿಕೆ ಮರಗಳಿಗೆ ಔಷಧಿ ಸಿಂಪಡಣೆ ಮಾಡುವ ವೇಳೆ ದೋಟಿ ವಿದ್ಯುತ್ ತಂತಿಗೆ ತಾಗಿ ಮದ್ದು ಸಿಂಪಡನೆ ಮಾಡುತಿದ್ದ ಉಡೈರೆ ಕೃಷ್ಣಪ್ಪ ಕುಲಾಲ್(49ವ) ರವರು ವಿದ್ಯುತ್ತಾಘಾತದಿಂದ ಮೃತ ಪಟ್ಟಿದ್ದಾರೆ.
ವಿದ್ಯುತ್ ಆಘಾತಕ್ಕೊಳಗಾಗಿ ಬಿದ್ದ ಕೂಡಲೇ ಕೃಷ್ಣಪ್ಪ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.