ಮಾಹಿತಿ ತಂತ್ರಜ್ಞಾನ

ಅಕ್ಟೋಬರ್ 2 ರಂದು ಸಂಪೂರ್ಣ ಸೂರ್ಯಗ್ರಹಣ..! ಭಾರತದಲ್ಲಿ ಗೋಚರಿಸಲಿದೆಯೇ?

Views: 251

ಈ ವರ್ಷದ 2ನೇ ಹಾಗೂ ಕೊನೆಯ ಸೂರ್ಯ ಗ್ರಹಣವು ಇದೆ ಅಕ್ಟೋಬರ್‌ 2ರಂದು ಸಂಭವಿಸುತ್ತಿದೆ, ಅಂದು ಮಹಾಲಯ ಅಮವಾಸ್ಯೆಯಾಗಿದ್ದು, ಪಿತೃಪಕ್ಷದ ಕೊನೆಯ ದಿನವಾಗಿದೆ. ಹೀಗಾಗಿ ಈ ಸೂರ್ಯಗ್ರಹಣ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಸಂಪೂರ್ಣ ಸೂರ್ಯ ಗ್ರಹಣವಾಗಿದ್ದು, ರಿಂಗ್ಸ್ ಆಫ್ ಫೈರ್ ಮಾದರಿಯಲ್ಲಿ ಕಂಡು ಬರಲಿದೆಯಂತೆ. ಚಂದ್ರನ ನೆರಳು ವಾಯುವ್ಯದಿಂದ ಆಗ್ನೇಯಕ್ಕೆ ಚಲಿಸುತ್ತದೆ ಮತ್ತು ಭೂಮಿಯ ವಕ್ರತೆ ಮತ್ತು ಚಂದ್ರನ ಬದಲಾಗುತ್ತಿರುವ ದೂರ ಮತ್ತು ಕಕ್ಷೆಯ ವೇಗದಿಂದಾಗಿ, ನೆರಳಿನ ವೇಗವು ವಿವಿಧ ಪ್ರದೇಶಗಳಲ್ಲಿ ನಾಟಕೀಯವಾಗಿ ಏರಿಳಿತಗೊಳ್ಳುತ್ತದೆ. ಹೀಗಾಗಿ ರಿಂಗ್ಸ್ ಆಫ್ ಫೈರ್ ವಿದ್ಯಮಾನವನ್ನು ಕಣ್ತುಂಬಿಕೊಳ್ಳಬಹುದು.

ಸೂರ್ಯಗ್ರಹಣವು ಫೆಸಿಫಿಕ್ ಸಮುದ್ರದಿಂದ ಆರಂಭಗೊಳ್ಳುತ್ತದೆ. ಹಾಗೆ ಈ ಸೂರ್ಯಗ್ರಹಣವು ಒಟ್ಟು 7 ನಿಮಿಷ ಮತ್ತು 25 ಸೆಕೆಂಡುಗಳ ಕಾಲ ದೀರ್ಘವಾಗಿರಲಿದೆ.

ಭಾರತದಲ್ಲಿ ಗೋಚರವಾಗುತ್ತಾ? ಈ ಹಿಂದೆ ಸಂಭವಿಸಿದ್ದ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣಗಳು ಭಾರತದಲ್ಲಿ ಗೋಚರವಾಗಿರಲಿಲ್ಲ. ಈಗ ಅಕ್ಟೋಬರ್ 2ರಂದು ಸಂಭವಿಸುತ್ತಿರುವ ಸೂರ್ಯಗ್ರಹಣ ಸಹ ಭಾರತದಲ್ಲಿ ಗೋಚರವಾಗುತ್ತಿಲ್ಲ. ಗ್ರಹಣ ಸಂಭವಿಸುವ ಸಮಯದಲ್ಲಿ ಭಾರತದಲ್ಲಿ ರಾತ್ರಿ ಆಗಿರುವುದರಿಂದ ಭಾರತದ ಯಾವುದೇ ಮೂಲೆಯಿಂದ ಈ ಗ್ರಹಣ ಗೋಚರವಾಗುವುದಿಲ್ಲ. ಗ್ರಹಣವು 9:13 PM IST ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ 3:17 PM IST ಕ್ಕೆ ಕೊನೆಗೊಳ್ಳುತ್ತದೆ. ಭಾರತೀಯ ಕಾಲಮಾನದಲ್ಲಿ (ತ್ರಿ 9.17 ರಿಂದ ಮುಂಜಾನೆ 3.14 ರವರೆಗೆ ಸೂರ್ಯಗ್ರಹಣ ಸಂಭವಿಸಲಿದೆ.

Related Articles

Back to top button