ಯುವಜನ

ʼಹೂವಿನ ಬಾಣದಂತೆ’ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿ ರಾತ್ರೋರಾತ್ರಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಮಂಡ್ಯದ  ನಿತ್ಯಶ್ರೀ

Views: 284

ಕನ್ನಡ ಕರಾವಳಿ ಸುದ್ದಿ: ʼಹೂವಿನ ಬಾಣದಂತೆ ಮೇ ಯಾರಿಗೂ ಕಾಣದಂತೆ’ ಈ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿ, ರಾತ್ರೋರಾತ್ರಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮೂಲದ ಯುವತಿ ನಿತ್ಯಶ್ರೀ ಈಗ ಸ್ಯಾಂಡಲ್‌ವುಡ್‌ನತ್ತ ಹೆಜ್ಜೆ ಹಾಕಿದ್ದಾರೆ.

‘ಬಿರುಗಾಳಿ’ ಚಿತ್ರದ ‘ಹೂವಿನ ಬಾಣದಂತೆ ಯಾರಿಗೂ ಕಾಣದಂತೆ’ ಎಂಬ ಹಾಡನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಹಾಡಿ ವೈರಲ್ ಆದ ನಿತ್ಯಶ್ರೀ, ಒಂದೆಡೆ ಸ್ಯಾಂಡಲ್‌ವುಡ್‌ ಗಮನ ಸೆಳೆದಿದ್ದರೆ, ಇನ್ನೊಂದೆಡೆ ತಾವು ಹಾಡಿದ ರೀತಿಗಾಗಿ ಕೊಂಚ ಪಶ್ಚಾತ್ತಾಪದಲ್ಲೂ ಮುಳುಗಿದ್ದಾರೆ.

ವೈರಲ್ ಯಾನ ಮತ್ತು ಸಿನಿಮಾ ಆಫರ್‌ಗಳು: ಕೆಲವೇ ದಿನಗಳ ಹಿಂದೆ ಸ್ನೇಹಿತರೊಂದಿಗೆ ತಮಾಷೆಗಾಗಿ ಹಾಡಿದ ‘ಹೂವಿನ ಬಾಣದಂತೆ’ ಹಾಡು, ನಿತ್ಯಶ್ರೀಯವರನ್ನು ಅನಿರೀಕ್ಷಿತವಾಗಿ ಟ್ರೆಂಡಿಂಗ್ ಸ್ಟಾರ್ ಆಗಿ ಪರಿವರ್ತಿಸಿತು. ಅವರ ವಿಶಿಷ್ಟ ಹಾಡುವ ಶೈಲಿ, ಉಚ್ಚಾರಣೆ ಮತ್ತು ಮುಗ್ಧತೆ ಯುವಜನತೆಯನ್ನು ಆಕರ್ಷಿಸಿತು.

ಇನ್‌ಸ್ಟಾಗ್ರಾಂನಲ್ಲಿ ಕೇವಲ 150 ಹಿಂಬಾಲಕರನ್ನು ಹೊಂದಿದ್ದ ನಿತ್ಯಶ್ರೀ, ಈ ಹಾಡು ವೈರಲ್ ಆದ ನಂತರ 47,000ಕ್ಕೂ ಹೆಚ್ಚು ಹಿಂಬಾಲಕರನ್ನು ಗಳಿಸುವ ಮೂಲಕ ಸೋಷಿಯಲ್ ಮೀಡಿಯಾದ ಶಕ್ತಿಯನ್ನು ಸಾಬೀತುಪಡಿಸಿದರು. ಈ ಹಾಡು ಲಕ್ಷಾಂತರ ವೀಕ್ಷಣೆಗಳನ್ನು ಕಂಡಿದ್ದು, ಇದಕ್ಕೆ ನೂರಾರು ರೀಲ್ಸ್‌ಗಳು ಸೃಷ್ಟಿಯಾಗಿವೆ.

ಈ ಅನಿರೀಕ್ಷಿತ ಜನಪ್ರಿಯತೆಯು ನಿತ್ಯಶ್ರೀಗೆ ಹೊಸ ಸಾಧ್ಯತೆಗಳ ಬಾಗಿಲು ತೆರೆದಿದೆ. ಮೂಲಗಳ ಪ್ರಕಾರ, ಒಂದಿಬ್ಬರು ಸಿನಿಮಾ ನಿರ್ದೇಶಕರು ನಿತ್ಯಶ್ರೀಯನ್ನು ಸಂಪರ್ಕಿಸಿದ್ದು, ತಮ್ಮ ಮುಂಬರುವ ಚಿತ್ರಗಳಲ್ಲಿ ನಟಿಸುವಂತೆ ಆಹ್ವಾನಿಸಿದ್ದಾರೆ. ಇದು ಯುವತಿ ನಿತ್ಯಶ್ರೀಯ ಪಾಲಿಗೆ ಒಂದು ಹೊಸ ತಿರುವು ನೀಡುವ ಲಕ್ಷಣಗಳು ಗೋಚರಿಸುತ್ತಿವೆ.

 

Related Articles

Back to top button
error: Content is protected !!