ಸಾಂಸ್ಕೃತಿಕ
ಹೌಂದರಾಯನ ವಾಲ್ಗ ಜಾನಪದ ನೃತ್ಯ ಕಲಾವಿದ ಗುಂಡು ಪೂಜಾರಿ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿಗೆ ಆಯ್ಕೆ

Views: 111
ಕನ್ನಡ ಕರಾವಳಿ ಸುದ್ದಿ: ಕನ್ನಡ ಜಾನಪದ ಪರಿಷತ್ ಬೆಂಗಳೂರು ಇವರು ಕೊಡಮಾಡುವ 2024 ನೆಯ ಸಾಲಿನ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಶ್ರೀಗುರು ಮಾರುತಿ ಹೌಂದರಾಯನ ವಾಲ್ಗ ಜಾನಪದ ನೃತ್ಯ ತಂಡ (ರಿ) ಇದರ ಹಿರಿಯ ಜಾನಪದ ಕಲಾವಿದರಾದ ಶ್ರೀ ಗುಂಡು ಪೂಜಾರಿ ಪಾರಂಪಳ್ಳಿ ಸಾಲಿಗ್ರಾಮ ಉಡುಪಿ ಜಿಲ್ಲೆ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರು ಹಾಗೂ ಭಾರತ ಸರಕಾರದ ಐ.ಸಿ.ಸಿ. ಆರ್ ಸದಸ್ಯರು ಆದ ಡಾ.ಎಸ್ ಬಾಲಾಜಿಯವರು ತಿಳಿಸಿರುತ್ತಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 26ರಂದು ಸೈಂಟ್ ಕ್ಲಾರೆಟ್ ಕಾಲೇಜು ಸ್ವಾಯತ್ತ ಜಾಲಹಳ್ಳಿ ಬೆಂಗಳೂರು ಇಲ್ಲಿ ನಡೆಯಲಿದೆ ಎಂದು ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲೆ ಇದರ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಗಂಗೊಳ್ಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






