ರಶ್ಮಿಕಾ ಮಂದಣ್ಣ -ವಿಜಯ್ ದೇವರಕೊಂಡ ಗುಟ್ಟಾಗಿ ಮದುವೆಯಾದ್ರಾ? ಫೋಟೋಸ್ ವೈರಲ್!
Views: 26
ಕನ್ನಡ ಕರಾವಳಿ ಸುದ್ದಿ: ಇತ್ತೀಚೆಗೆ ‘ದಿ ಗರ್ಲ್ ಫ್ರೆಂಡ್’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ದೇವರಕೊಂಡ ಅವರು ರಶ್ಮಿಕಾ ಕೈಗೆ ಮುತ್ತು ಕೊಟ್ಟು, ಸಂಬಂಧವನ್ನು ಅಧಿಕೃತಗೊಳಿಸಿದ್ದರು.
ಇಬ್ಬರು ಇನ್ನೂ ಬಹಿರಂಗವಾಗಿ ಸಂಬಂಧದ ಬಗ್ಗೆ ಮಾತನಾಡಿಲ್ಲ. ಇತ್ತೀಚೆಗೆ ರಶ್ಮಿಕಾ ಸ್ನೇಹಿತೆಯರ ಜತೆ ಶ್ರೀಲಂಕಾ ಸುತ್ತಾಡಿದ್ದರು. ಇದು ಅವರ ಬ್ಯಾಚುಲರ್ ಪಾರ್ಟಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಮಂದಣ್ಣ – ವಿಜಯ್ ದೇವರಕೊಂಡ ಅವರ ಎಂಗೇಜ್‌ಮೆಂಟ್ ವಿಚಾರದಿಂದ ಸುದ್ದಿಯಾಗಿದ್ದಾರೆ. ಈಗ ಇಬ್ಬರು ಮದುವೆಯ ಉಡುಗೆಯಲ್ಲಿ ಕಾಣಿಸಿಕೊಂಡಿರುವ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.!
ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಕಳೆದ ಕೆಲ ವರ್ಷಗಳಿಂದ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ‘ಗೀತಾ ಗೋವಿಂದಂ’, ‘ಡಿಯರ್ ಕಾಮ್ರಡ್’ ಮೂಲಕ ಬಣ್ಣದ ಲೋಕದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದ ರಶ್ಮಿಕಾ – ದೇವರಕೊಂಡ ಸಿನಿಮಾದ ಬಳಿಕವೂ ನಿಜ ಜೀವನದಲ್ಲಿ ಆತ್ಮೀಯವಾಗಿ ಅನೇಕ ಸಲಿ ಕಾಣಿಸಿಕೊಂಡಿದ್ದಾರೆ.
ಅ.3 ರಂದು ದೇವರಕೊಂಡ ಅವರ ನಿವಾಸದಲ್ಲಿ ಆತ್ಮೀಯರ ಸಮ್ಮುಖದಲ್ಲಿ ಇಬ್ಬರ ನಿಶ್ಚಿತಾರ್ಥ ನೆರವೇರಿದೆ. ಇಬ್ಬರು 2026ರ ಫೆಬ್ರವರಿಯಲ್ಲಿ ಮದುವೆ ಆಗಲಿದ್ದಾರೆ ಎನ್ನಲಾಗಿದೆ.
ಈ ನಡುವೆ ಸೀಕ್ರೆಟ್ ಆಗಿ ದೇವರಕೊಂಡ – ರಶ್ಮಿಕಾ ಮದುವೆ ಆಗಿರುವ ಫೋಟೋಸ್ ವೈರಲ್ ಆಗಿದೆ.
‘ಗುಂಟಿ ಶ್ರೀಕಲಾ ನಾಗರಾಜು’ ಎನ್ನುವ ಖಾತೆಯಲ್ಲಿ ರಶ್ಮಿಕಾ -ದೇವರಕೊಂಡ ಅವರ ಮದುವೆ ಫೋಟೋಸ್ ಹಂಚಿಕೊಳ್ಳಲಾಗಿದೆ.
ಈ ಚಿತ್ರಗಳಲ್ಲಿ ರಶ್ಮಿಕಾ ಮತ್ತು ವಿಜಯ್ ಮದುವೆಯ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಕ್ಕಾ ನಟ ಮಹೇಶ್ ಬಾಬು ಮತ್ತು ಅವರ ಪತ್ನಿ ನಮ್ರತಾ ಶಿರೋಡ್ಕರ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಎಂದು ಬರೆದು ಹ್ಯಾಪಿ ಮ್ಯಾರೇಡ್ ಲೈಫ್ ಎಂದು ಬರೆಯಲಾಗಿದೆ.
ಅಸಲಿಗೆ ಇದೊಂದು ಎಐ ರಚಿತ ಫೋಟೋ ಆಗಿದೆ. ಥೇಟು ಅಸಲಿ ಫೋಟೋವಂತೆ ಕಾಣಿಸುತ್ತಿದ್ದು, ಇದಕ್ಕೆ ಲಕ್ಷಗಟ್ಟಲೇ ಲೈಕ್ಸ್ ಬಂದಿದೆ.
ಕೆಲವರು ಈ ರೀತಿ ಮಾಡಬೇಡಿ ಎಂದು ಕಮೆಂಟ್ ಮಾಡಿದ್ದು, ಇನ್ನು ಕೆಲವರು ಕ್ಯೂಟ್ ಎಂದು ಬರೆದುಕೊಂಡಿದ್ದಾರೆ.






