ಕೃಷಿ
ಹುಲಿ ದಾಳಿ: ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಸಾವು

Views: 102
ಕನ್ನಡ ಕರಾವಳಿ ಸುದ್ದಿ: ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ವಯನಾಡು ಜಿಲ್ಲೆಯ ತಾರಾಟ್ ನಿವಾಸಿ ರಾಧಾ (46) ಅವರನ್ನು ಹುಲಿಯೊಂದು ಕೊಂದು ತಿಂದ ಘಟನೆ ನಡೆದಿದೆ.
ಮಹಿಳೆಯನ್ನು ಕೊಂದ ಹುಲಿಯನ್ನು ಕೂಡಲೇ ಹತ್ಯೆ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯರು ಮಾನಂದವಾಡಿ ಅರಣ್ಯ ಇಲಾಖೆ ಕಚೇರಿ ಎದುರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.
ಇಲ್ಲಿನ ಪ್ರಿಯದರ್ಶಿನಿ ಎಸ್ಟೇಟ್‌ನಲ್ಲಿ ಕಾಫಿ ಬೀಜ ಕೊಯ್ಯುತ್ತಿದ್ದ ಮಹಿಳೆ ರಾಧಾ ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿತ್ತು. ಅವರ ಮೃತದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಕಾನೂನಿನ ಅನ್ವಯವೇ ಹುಲಿಯನ್ನು ಬಂಧಿಸಲು ಬೋನು ಅಳವಡಿಸಲಾಗಿದೆ. ಅದರಲ್ಲಿ ಬೀಳದಿದ್ದರೆ, ರಾಷ್ಟ್ರೀಯ ಹುಲಿ ಪ್ರಾಧಿಕಾರ ಪ್ರಕಟಿಸಿರುವ ಪ್ರಮಾಣಿತ ಕಾರ್ಯಾಚರಣೆ ಮೂಲಕ ಅದನ್ನು ಹತ್ಯೆ ಮಾಡಲು ವನ್ಯಜೀವಿ ವಿಭಾಗದ ಮುಖ್ಯ ವಾರ್ಡನ್ ಪ್ರಮೋದ್ ಜಿ.ಕೃಷ್ಣನ್ ಆದೇಶ ಹೊರಡಿಸಿದ್ದಾರೆ’ ಎಂದು ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದರು.
‘