ಶಿಕ್ಷಣ
ಸರಕಾರಿ ಪ್ರೌಢಶಾಲೆ ವಕ್ವಾಡಿಯಲ್ಲಿ ಇಳಾ ಇಕೋ ಕ್ಲಬ್ ವತಿಯಿಂದ ಔಷಧೀಯ ಸಸ್ಯಗಳ ಮಾಹಿತಿ
Views: 23
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ವಕ್ವಾಡಿ ಸರಕಾರಿ ಪ್ರೌಢಶಾಲೆಯ ಇಳಾ ಇಕೋ ಕ್ಲಬ್ ವತಿಯಿಂದ ಆಹಾರವಾಗಿ ಬಳಸಬಹುದಾದ ಔಷಧೀಯ ಗುಣ ಹೊಂದಿರುವ ಸಸ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಮಾ.4ರಂದು ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಸರಕಾರಿ ಪ್ರೌಢಶಾಲೆ ಕಾಳಾವರದ ವಿಜ್ಞಾನ ಶಿಕ್ಷಕರಾದ ಶ್ರೀಮತಿ ಪ್ರತಿಭಾರವರು 25 ಕ್ಕೂ ಔಷಧೀಯ ಗುಣ ಹೊಂದಿರುವ ಸಸ್ಯಗಳ ಬಳಕೆಯ ವಿಧಾನ, ಮಹತ್ವ, ಬೆಳೆಸುವ ರೀತಿ, ನೈಸರ್ಗಿಕ ಔಷಧಗಳ ಜ್ಞಾನ ಇವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ಸಸ್ಯಗಳು ಮತ್ತು ಪಿಪಿಟಿಯ ಮೂಲಕ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಜಾತ ರವರು ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಕುಸುಮಾಕರ ಶೆಟ್ಟಿಯವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪರಿಸರ ಸಂಘದ ಸಂಚಾಲಕರಾದ ಶ್ರೀಮತಿ ಭಾರತಿ .ಎನ್ ಕಾರ್ಯಕ್ರಮ ಸಂಯೋಜಿಸಿದ್ದರು. ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.







