ಜನಮನ
ಸೇನೆ ಪರೀಕ್ಷೆಯಲ್ಲಿ ಫೇಲ್: ಸೆಲೆಕ್ಟ್ ಆಗಿರಲಿಲ್ಲ ಎಂದು ಯುವಕ ಆತ್ಮಹತ್ಯೆ

Views: 28
ಚಿಕ್ಕಮಗಳೂರು : ಭಾರತೀಯ ಸೇನೆ ಸೇರುವ ಮಹತ್ವಾಕಾಂಕ್ಷೆ ಹೊತ್ತು ಪರೀಕ್ಷೆ ಎದುರಿಸಿದ್ದ ಯುವಕನೊಬ್ಬ ಪರೀಕ್ಷೆಯಲ್ಲಿ ಫೇಲ್ ಆದ ಬೇಸರದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಯಡದಾಳು ಗ್ರಾಮದ ಕಾರ್ತಿಕ್ (23) ಆತ್ಮಹತ್ಯೆ ಮಾಡಿಕೊಂಡ ಯುವಕ.
ಕಾರ್ತಿಕ್ ಕಳೆದ ಎರಡು ವರ್ಷದಿಂದ ಸೇನಾ ಪರೀಕ್ಷೆಗೆ ಸಂಬಂಧಿಸಿ ಸಾಕಷ್ಟು ಸಿದ್ಧತೆಗಳನ್ನು ನಡೆಸಿದ್ದ. ಬರೆಯುವ ಪರೀಕ್ಷೆ, ದೈಹಿಕ ಪರೀಕ್ಷೆ, ಕ್ರೀಡೆ ಮತ್ತು ಇತರ ಹಲವು ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದ. ಇತ್ತೀಚೆಗೆ ಪರೀಕ್ಷೆಯೂ ನಡೆದಿತ್ತು. ಒಂದೆರಡು ದಿನದ ಹಿಂದೆ ಅದರ ಫಲಿತಾಂಶ ಬಂದಿತ್ತು. ಕಾರ್ತಿಕ್ ಸೇನೆಗೆ ಸೆಲೆಕ್ಟ್ ಆಗಿರಲಿಲ್ಲ. ಈ ಬಾರಿ ಸೆಲೆಕ್ಟ್ ಆಗಗಿದ್ದರೂ ಮುಂದೆ ಅವಕಾಶ ಸಿಗಬಹುದು ಎಂಬ ಆಲೋಚನೆಗೂ ಹೋಗದೆ, ಸೇನೆಗೆ ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕಾಗಿಯೇ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ.