ಸಾಂಸ್ಕೃತಿಕ
ಸಾಸ್ತಾನ ಮಠದ ತೋಟ ಫ್ರೆಂಡ್ಸ್: ಮೂರನೇ ವರ್ಷದ ಯಕ್ಷಗಾನ, ಪ್ರಸಂಗಕರ್ತರಿಗೆ ಸನ್ಮಾನ

Views: 124
ಕನ್ನಡ ಕರಾವಳಿ ಸುದ್ದಿ: ಸಾಸ್ತಾನ ಮಠದ ತೋಟ ಫ್ರೆಂಡ್ಸ್ ಇವರ ಮೂರನೇ ವರ್ಷದ ಯಕ್ಷಗಾನ ಕಾರ್ಯಕ್ರಮದ ಅಂಗವಾಗಿ ಬೈಂದೂರು ಕಳವಾಡಿ ಮೇಳದವರಿಂದ ಖ್ಯಾತ ಪ್ರಸಂಗಕರ್ತ ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ ವಿರಚಿತ “ಕಳವಾಡಿ ಶ್ರೀ ಮಾರಿಕಾಂಬ ಕ್ಷೇತ್ರ ಮಹಾತ್ಮೆ” ಯಕ್ಷಗಾನ ಪ್ರದರ್ಶನ ಮಾ.9 ರಂದು ನಡೆಯಿತು.
ಇದೇ ಸಂದರ್ಭದಲ್ಲಿ ಪ್ರಸಂಗಕರ್ತ ಬಸವರಾಜ ಶೆಟ್ಟಿಗಾರ್ ಅವರಿಗೆ 601ನೇ ಸನ್ಮಾನ ಕಾರ್ಯಕ್ರಮ ನಡೆಯಿತು.
ಕ್ಷೇತ್ರದ ಮೊಕ್ತೇಸರ ಮನೆಯವರಾದ ಪ್ರದೀಪ್ ಶೆಟ್ಟಿ, ಮೇಳದ ಮೆನೇಜರ್ ಗುಂಡು ಕಾಂಚನ್, ಹೈಗುಳಿ ಚೌಂಡಿ ಪರಿವಾರ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸತ್ಯನಾರಾಯಣ ಚಡಗ, ಮಠದ ತೋಟ ಫ್ರೆಂಡ್ಸ್ ಪ್ರಮುಖರಾದ ಸಂಜೀವ ಶೆಟ್ಟಿಗಾರ್, ಸಂದೇಶ್ ಪೂಜಾರಿ ಉಪಸ್ಥಿತರಿದ್ದರು, ಭಾಸ್ಕರ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.