ಧಾರ್ಮಿಕ

ಸಂಸದ ತೇಜಸ್ವಿ ಸೂರ್ಯ ಶಿವಶ್ರೀ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನಾಮಸಂಕೀರ್ತನೆ

Views: 80

ಕನ್ನಡ ಕರಾವಳಿ ಸುದ್ದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ ದಂಪತಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ.

ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಬಳಿಕ ನವದಂಪತಿ, ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ.

ಸಂಸತ್ತಿನಲ್ಲಿ ವೇದಘೋಷ ಮೊಳಗಿಸಲು ಹೊರಗಿನಿಂದ ವೈದಿಕರನ್ನು ಕರೆಸುವ ಅಗತ್ಯ ಇಲ್ಲ, ನಮ್ಮ ಸಂಸದರೇ ಸಾಕು. ಇಬ್ಬರೂ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುವ ದಂಪತಿಯಾಗಿದ್ದಾರೆ. ಇಡಿ ದೇಶಕ್ಕೆ ಇವರ ಸೇವೆ, ಸ್ಫೂರ್ತಿ ಸಿಗುವಂತಾಗಲಿ ಎಂದು ಶ್ರೀಗಳು ಹಾರೈಸಿದ್ದಾರೆ.

ಬಳಿಕ ಶ್ರೀ ಕೃಷ್ಣನ ರಾತ್ರಿಯ ಮಹಾಪೂಜೆ ಮತ್ತು ಪ್ರತಿದಿನ ನಡೆಯುವ ರಥೋತ್ಸವ ಸೇವೆಯಲ್ಲಿ ನವದಂಪತಿ ಭಾಗಿಯಾಗಿದ್ದಾರೆ. ಈ ವೇಳೆ ಶ್ರೀ ಕೃಷ್ಣನ ತೊಟ್ಟಿಲ ಪೂಜೆಯ ವೇಳೆ ಅಷ್ಟಾವಧಾನ ಸೇವೆಯಲ್ಲಿ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸುಶ್ರಾವ್ಯವಾಗಿ ನಾಮಸಂಕೀರ್ತನೆ ಮಾಡಿದರು.ಪತಿ ಸಂಸದ ತೇಜಸ್ವಿ ಸೂರ್ಯ ವೇದಘೋಷ ಮಾಡಿದರು.

Related Articles

Back to top button