ಶಿರಿಯಾರ ರಾಮ ಮಂದಿರ: ಪಂಚಲೋಹದ ವಿಗ್ರಹ, ಆಭರಣ,ಕಾಣಿಕೆ ಹುಂಡಿ ಕಳವು

Views: 89
ಕನ್ನಡ ಕರಾವಳಿ ಸುದ್ದಿ: ಶಿರಿಯಾರದ ಶ್ರೀರಾಮ ಮಂದಿರದ ಬಾಗಿಲು ಒಡೆದು ಕಾಣಿಕೆ ಹುಂಡಿ ಹಾಗೂ ರಾಮ, ಸೀತೆ, ಲಕ್ಷಣ, ಹನುಮಂತನ ಪಂಚಲೋಹದ ಮೂರ್ತಿಯನ್ನು ಕಳ್ಳರು ಕಳವು ಮಾಡಿದ ಘಟನೆ ನಡೆದಿದೆ.
ಮಂಗಳವಾರ ರಾತ್ರಿ ಪೂಜೆ ಮುಗಿಸಿ ದೇಗುಲದ ಬಾಗಿಲು ಹಾಕಿ ತೆರಳಿದ್ದು ಬೆಳಿಗ್ಗೆ ಬಂದು ನೋಡಿದಾಗ ಬಾಗಿಲು ಮುರಿದಿರುವುದು ಹಾಗೂ ದೇವರ ಮೂರ್ತಿ, ಕಾಣಿಕೆ ಹುಂಡಿ,ಆಭರಣ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.
ಬುಧವಾರ ಶ್ವಾನದಳ ಹಾಗೂ ಪೊಲೀಸರ ಕಾರ್ಯಾಚರಣೆಯಿಂದ ನೀರಲ್ಲಿದ್ದ ದೇವರ ಮೂರ್ತಿ ಹಾಗೂ ಒಡೆದ ಕಾಣಿಕೆ ಡಬ್ಬವನ್ನು ಪತ್ತೆ ಹಚ್ಚಲಾಗಿದೆ.
ಬ್ರಹ್ಮಾವರ ವೃತ್ತ ನಿರೀಕ್ಷಕರಾದ ದಿವಾಕರ್, ಕೋಟ ಠಾಣಾ ಎಎಸ್‌ಐ ಗೋಪಾಲ್ ಪೂಜಾರಿ ನೇತೃತ್ವದ ತಂಡ ಪತ್ತೆ ಕಾರ್ಯಾಚರಣೆ ಆರಂಭಿಸಿ, ಶ್ವಾನದಳದ ಸಹಾಯದಿಂದ ದೇಗುಲದ ಸುತ್ತ ಮುತ್ತ ತಪಾಸಣೆ ನಡೆಸಿ ಅಲ್ಲಿಂದ. ಸುಮಾರು 600 ಮೀಟರ್ ದೂರದ ನದಿಯ ದಂಡೆ ಹತ್ತಿರ ದೇವರ ಆಭರಣ ಪತ್ತೆಹಚ್ಚಲಾಯಿತು. ಮುಳಗು ತಜ್ಞರ ಸಹಾಯದಿಂದ ನದಿಯಲ್ಲಿ ಹುಡುಕಿದಾಗ ಪಾಣಿಪೀಠ ಸಹಿತ ರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮಂತನ ವಿಗ್ರಹ ಪತ್ತೆಯಾಗಿದೆ.