ವೈದ್ಯ ಮತ್ತು ಸಿಬ್ಬಂದಿಗಳಿಗೆ ಸಮಾಜದ ದುಷ್ಟ ಶಕ್ತಿಗಳಿಂದ ಆಗುವ ತೊಂದರೆ ಮತ್ತು ಕಿರುಕುಳಕ್ಕೆ ಕಾನೂನಿನ ರಕ್ಷಣೆ

Views: 1
ಕುಂದಾಪುರದ ಆಯುಷ್ ವೈದ್ಯರುಗಳಿಗೆ ಕುಂದಾಪುರ ಹೋಟೆಲ್ ಶರೋನ್ ಸಭಾಂಗಣದಲ್ಲಿ ಮಂಗಳೂರಿನ ಕೆನರಾ ಲೈಫ್ ಸೈನ್ಸ್ ಇವರ ಪ್ರಾಯೋಜಕತ್ವದಲ್ಲಿ ಕಾನೂನು ಮಾಹಿತಿ ನೀಡಲಾಯಿತು.
ಕುಂದಾಪುರದ ಸರ್ಕಲ್ ಇನ್ಸ್ಪೆಕ್ಟರ್ ಶ್ರೀ ನಂದಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವೈದ್ಯ ವೃತ್ತಿ ಒಂದು ಶ್ರೇಷ್ಠ ವೃತ್ತಿ ಅವರ ಕೊಡುಗೆ ಸಮಾಜಕ್ಕೆ ಅತ್ಯಗತ್ಯ ಅವರನ್ನು ಗೌರವಪೂರ್ಣವಾಗಿ ನಡೆಸಿಕೊಳ್ಳುವುದು ನಮ್ಮೆಲ್ಲರ ಆಧ್ಯ ಕರ್ತವ್ಯ ಎಂದರು.
ಸಂಪನ್ಮೂಲ ವ್ಯಕ್ತಿ ಮತ್ತು ಕಾನೂನು ಸಲಹೆಗಾರರು ಆಗಿರುವ ವಿವೇಕಾನಂದ ಪಣಿಯಾಲ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಕಾನೂನು ಸಲಹೆಗಳನ್ನು ನೀಡಿದರು.
ಸಂಪನ್ಮೂಲ ವ್ಯಕ್ತಿ ಕೆ ಸಿ.ಅಶೋಕನ್ (ನಿವ್ರತ್ತ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್) ಮಾತನಾಡಿ, ಇಂತಹ ಅನೇಕ ಸಂದರ್ಭಗಳಲ್ಲಿ ವೈದ್ಯರುಗಳ ದೂರು ದಾಖಲಾಗದಿರುವುದು ದುಷ್ಕರ್ಮಿಗಳಿಗೆ ಪೂರಕ ವಾತಾವರಣವನ್ನು ಕಲ್ಪಿಸುತ್ತಾರೆ. ಆದ್ದರಿಂದ ಇಂಥಹ ಸಂದರ್ಭ ಒದಗಿದಾಗ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಿ ಎಂದರು.
ಶ್ರೀ ಆರ್. ಎಂ. ಗಂಜಿಗಟ್ಟಿ (ನಿವೃತ್ತ ಡೆಪ್ಯೂಟಿ ಡೈರೆಕ್ಟರ್ ಆಫ್ ಪ್ರೋಸಿಕ್ವಿಶನ್ ) ಅವರು ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ವೈದ್ಯ ಮತ್ತು ವೈದ್ಯ ಸಿಬ್ಬಂಧಿಗಳನ್ನು ಅವಹೇಳನಕಾರವಾಗಿ ಚಿತ್ರಿಸುವುದು ಅವರ ಭಾವಚಿತ್ರವನ್ನು ಬಳಸುವ ಕುರಿತು ತೀವ್ರ ಕಳಗಳ ವ್ಯಕ್ತಪಡಿಸಿದರು.
ಎಎಫ್ಐ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ಡಾ. ಎನ್.ಟಿ. ಅಂಚನ್, ಕಾರ್ಯದರ್ಶಿ ಡಾ. ಸತೀಶ್ ರಾವ್, ಸಂದೀಪ್ ಸನಿಲ್, ಕುಂದಾಪುರದ ಅಧ್ಯಕ್ಷರಾದ ಡಾ.ಹರಿಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಡಾ. ಕೃಷ್ಣರಾವ್ ಇದ್ದರು.