ಇತರೆ

ಕಂಬದಕೊಣೆ:ವಿವಿಧ ಮಸಾಲಾ ಪದಾರ್ಥಗಳ ಪೌಡರ್ ತರಬೇತಿ

Views: 121

ಕನ್ನಡ ಕರಾವಳಿ ಸುದ್ದಿ: ಟಿ.ಎಂ ಜಿ ಸುನಿಧಿ ಫೌಂಡೇಶನ್ ಟ್ರಸ್ಟ್ ಮಣಿಪಾಲ ಪ್ರಾಯೋಜಕತ್ವದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಕಂಬದಕೋಣೆ ಗ್ರಾಮ ಪಂಚಾಯತ್ ಇವರ ಮಾರ್ಗದರ್ಶನದಲ್ಲಿ ಬೈಂದೂರು ತಾಲೂಕಿನ ಕಂಬದಕೋಣೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ 8 ದಿನಗಳ ಕಾಲ ವಿವಿಧ ಮಸಾಲಾ ಪದಾರ್ಥಗಳ ಪೌಡರ್ ತರಬೇತಿಯ ಸಮಾರೋಪ ಸಮಾರಂಭ ನಡೆಯಿತು.  

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಸುಕೇಶ್ ಶೆಟ್ಟಿ, ರಾಜೇಶ್ ದೇವಾಡಿಗ, ಮತ್ತು ಶಿವರಾಮ ಹಳಗೇರಿ,ಪಂಚಾಯತ್ ಕಾರ್ಯದರ್ಶಿ ಪಾರ್ವತಿ , ಬಿವಿಟಿ ಮಣಿಪಾಲದ ರಾಘವೇಂದ್ರ ಆಚಾರ್ಯ ಕೆದೂರು, ಪಂಚಾಯತ್ ಸದಸ್ಯರಾದ ಕನಕ, ಗ್ರಂಥಾಲಯ ಸಿಬ್ಬಂದಿ ಸುಮಿತ್ರಾ, ತರಬೇತುದಾರರಾದ ಸಂಧ್ಯಾ ಮಲ್ಪೆ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಶಿಬಿರದ ಬಗ್ಗೆ ಶಿಬಿರಾರ್ಥಿಗಳ ಪರವಾಗಿ ಗೀತಾ,ಕನಕ, ಕಮಲಾಕ್ಷಿ, ಅನುಪಮಾ ಅನಿಸಿಕೆ ಹಂಚಿಕೊಂಡರು.

ಗೀತಾ, ನಾಗರತ್ನ,ಶಾಂತ ಪ್ರಾರ್ಥಿಸಿ, ಪಂಕಜ ಸ್ವಾಗತಿಸಿ, ನಾಗಶ್ರೀ ವಂದಿಸಿ, ಅನುಪಮಾ ನಿರೂಪಿಸಿದರು. ಒಟ್ಟು 30 ಜನ ಫಲಾನುಭವಿಗಳು ತರಬೇತಿ ಪ್ರಯೋಜನ ಪಡೆಯಲು ಪಡೆದರು.

Related Articles

Back to top button
error: Content is protected !!