ಆರೋಗ್ಯ

ವೆಂಟಿಲೇಟರ್‌ನಲ್ಲಿದ್ದಾಗ ಸಿಬ್ಬಂದಿಯಿಂದಲೇ  ಗಗನಸಖಿಯ ಮೇಲೆ ಲೈಂಗಿಕ ದೌರ್ಜನ್ಯ

Views: 98

ಕನ್ನಡ ಕರಾವಳಿ ಸುದ್ದಿ: ವೆಂಟಿಲೇಟರ್‌ನಲ್ಲಿದ್ದಾಗ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಗಗನಸಖಿಯೊಬ್ಬರು ಆರೋಪಿಸಿದ್ದಾರೆ.

ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವಾಗ ಇಬ್ಬರು ನರ್ಸ್‌ಗಳು ಕೋಣೆಯಲ್ಲಿದ್ದರು ಆದರೆ ಘಟನೆಯನ್ನು ತಡೆಯಲು ಏನೂ ಮಾಡಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಸದ್ಯ ಆಕೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ. ಪೊಲೀಸರ ಪ್ರಕಾರ, ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ಕಾರ್ಯಾಗಾರಕ್ಕಾಗಿ ನಗರಕ್ಕೆ ಬಂದಿದ್ದರು , ಅವರು ತಂಗಿದ್ದ ಹೋಟೆಲ್‌ನ ಈಜುಕೊಳದಲ್ಲಿ ಈಜಲು ಹೋಗಿ ಅಸ್ವಸ್ಥಳಾದ ನಂತರ ಆಸ್ಪತ್ರೆಗೆ ದಾಖಲಾಗಿದ್ದರು.

ದೂರಿನಲ್ಲಿ ಉಲ್ಲೇಖಿಸಿರುವಂತೆ, ಮಹಿಳೆ ಮಾರ್ಚ್ 31 ರಂದು ಗುರುಗ್ರಾಮ್‌ಗೆ ದರ್ಬಾರಿಪುರ, ಸೆಕ್ಟರ್ 75 ರಲ್ಲಿ ವಿಮಾನಯಾನ ನಿರ್ವಾಹಕರೊಬ್ಬರ ತರಬೇತಿ ಕಾರ್ಯಕ್ರಮಕ್ಕಾಗಿ ಬಂದಿದ್ದರು. ಏಪ್ರಿಲ್ 5 ರಂದು, ಗಗನಸಖಿಯನ್ನು ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 6 ರಂದು, ಕೆಲವು ಆಸ್ಪತ್ರೆ ಸಿಬ್ಬಂದಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಾಗ ನಾನು ವೆಂಟಿಲೇಟರ್‌ನಲ್ಲಿದ್ದೆ” ಎಂದು ದೂರಿನಲ್ಲಿ ಹೇಳಲಾಗಿದೆ. ನಾನು ಸಂಪೂರ್ಣವಾಗಿ ಅಶಕ್ತಳಾಗಿದ್ದೆ, ವ್ಯಕ್ತಿಯ ವರ್ತನೆಯನ್ನು ವಿರೋಧಿಸುವ ಅಥವಾ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಕೋಣೆಯಲ್ಲಿದ್ದ ಇಬ್ಬರು ನರ್ಸ್‌ಗಳು ಇದ್ದರು, ಆದರೆ ಅವರು ಮಧ್ಯಪ್ರವೇಶಿಸಲಿಲ್ಲ ಎಂದು ಸಂತ್ರಸ್ತೆ ದೂರಿನಲ್ಲಿ ದಾಖಲಿಸಿದ್ದಾರೆ.

ಏಪ್ರಿಲ್ 13 ರಂದು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ, ಗಗನಸಖಿ ತನ್ನ ಪತಿಗೆ ಘಟನೆಯ ಬಗ್ಗೆ ತಿಳಿಸಿ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಮರುದಿನ ಭಾರತೀಯ ನ್ಯಾಯ ಸಂಹಿತಾದ ಲೈಂಗಿಕ ಕಿರುಕುಳ ಮತ್ತು ಇತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು.

 

 

Related Articles

Back to top button