ಸಾಂಸ್ಕೃತಿಕ

ವಿಚ್ಚೇದನ ನೀಡಿ ಐದು ವರ್ಷಗಳ ನಂತರ ಮತ್ತೊಮ್ಮೆ ಮೊದಲ ಪತ್ನಿಯ ಜೊತೆ ಮದುವೆಗೆ ತಯಾರಾದ ಬಾಲಿವುಡ್‌ ನಟ!

Views: 118

ಕನ್ನಡ ಕರಾವಳಿ ಸುದ್ದಿ:  ಬೆಂಗಳೂರು ಮೂಲದ ಬಾಲಿವುಡ್‌ ನಟ ಗುಲ್ಶನ್ ದೇವಯ್ಯ ಪತ್ನಿಗೆ ವಿಚ್ಚೇದನ ನೀಡಿ ಐದು ವರ್ಷಗಳ ನಂತರ ಗುಲ್ಶನ್ ದೇವಯ್ಯ ಈಗ ಮತ್ತೊಮ್ಮೆ ತಮ್ಮ ಮೊದಲ ಪತ್ನಿ ಕಲ್ಲಿರಾಯ್ ಜೊತೆ ಮದುವೆಯಾಗಲು ರೆಡಿಯಾಗಿದ್ದಾರೆ.

ಹಲವಾರು ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಗಮನ ಸೆಳೆದ ಕಲಾವಿದ ಗುಲ್ಶನ್ ದೇವಯ್ಯ 2012ರಲ್ಲಿ ಗ್ರೀಸ್ ಮೂಲದ ಕಲ್ಲಿರಾಯ್ ಅವರ ಜೊತೆ ಮದುವೆಯಾದರು. 8 ವರ್ಷ ಸಂಸಾರವನ್ನು ಕೂಡ ನಡೆಸಿದರು. ಆದರೆ.. ಕಲ್ಲಿರಾಯ್ ವಿದೇಶದವಳಾಗಿದ್ದು, ಇಬ್ಬರ ಆಚಾರ-ವಿಚಾರ-ಸಂಪ್ರದಾಯಗಳಲ್ಲಿದ್ದ ವ್ಯತ್ಯಾಸದಿಂದ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಲು ಶುರುವಾಯ್ತು. ಹೀಗಾಗಿ 2020ರಲ್ಲಿ ಗುಲ್ಶನ್ ದೇವಯ್ಯ ಮತ್ತು ಕಲ್ಲಿರಾಯ್ ವಿಚ್ಛೇದನವನ್ನು ಪಡೆದರು. ತಮ್ಮ ತಮ್ಮ ದಾರಿಯನ್ನು ಹುಡುಕಿಕೊಂಡು ಮುನ್ನಡೆಯಲು ಶುರು ಮಾಡಿದರು.

ಆದರೆ ಪ್ರೀತಿ ಅಂದರೆ ಹಾಗೇ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ.ಮತ್ತೆ ತಮ್ಮ ಮೊದಲ ಪತ್ನಿಯ ಸಾಂಗತ್ಯವನ್ನು ಬಯಸಿದ ಗುಲ್ಶನ್ ದೇವಯ್ಯ 2023ರಲ್ಲಿ ಅಂದರೆ ವಿಚ್ಛೇದನ ಪಡೆದು ಮೂರು ವರ್ಷಗಳ ನಂತರ ಮತ್ತೆ ಕಲ್ಲಿರಾಯ್ ಅವರ ಬಳಿ ತೆರಳಿದರು. ತಮ್ಮ ಮಾಜಿ ಪತ್ನಿಯನ್ನು ಡೇಟಿಂಗ್ ಮಾಡಲು ಶುರು ಮಾಡಿದರು. ಮಾಜಿ ಪತ್ನಿ ಜೊತೆ ಸಂಬಂಧ ಹೊಂದಿರುವುದಾಗಿ ಕೂಡ 2023ರಲ್ಲಿ ಅಧಿಕೃತವಾಗಿ ಘೋಷಿಸಿದರು. ಈ ಸಂಬಂಧವನ್ನು ನಾವು ಇಬ್ಬರು ಬೇರೆ ದೃಷ್ಟಿಕೋನದಿಂದ ನೋಡುತ್ತಿರುವುದಾಗಿಯೂ ಕೂಡ ಹೇಳಿದರು.

ಹೀಗೆ ದೂರವಾಗಿ ಮತ್ತೆ ಮಾಜಿ ಪತ್ನಿಯ ಜೊತೆ ಮತ್ತೆ ಪ್ರೀತಿಯಲ್ಲಿ ಬಿದ್ದ ಗುಲ್ಶನ್ ದೇವಯ್ಯ ಸದ್ಯ ತಮ್ಮ ಮಾಜಿ ಪತ್ನಿ ಕಲ್ಲಿರಾಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ‘ನನ್ನ ಪ್ರೀತಿ ಮತ್ತು ನನ್ನ ಆತ್ಮೀಯ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯಗಳು. ಇಲ್ಲಿಂದ ಮುಂದೆ ನಮ್ಮ ಪ್ರಯಾಣ ಹೇಗಿರುತ್ತದೆ ಎಂಬುದರ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ’ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಗುಲ್ಶನ್ ದೇವಯ್ಯ ಅವರ ಈ ಬರಹ ಮತ್ತು ಫೋಸ್ಟ್‌ ಈಗ ಇವರಿಬ್ಬರ ಮರು ಮದುವೆಯ ಚರ್ಚೆಗೆ ನಾಂದಿಯನ್ನು ಹಾಡಿದೆ.

Related Articles

Back to top button