ಯುವಜನ

ರೀಲ್ಸ್ ವಿಚಾರದಲ್ಲಿ ಗಲಾಟೆ: ಪ್ರಿಯಕರನ ಜೊತೆ ಸೇರಿ ಗಂಡನ ಉಸಿರುಕಟ್ಟಿಸಿ ಕೊಲೆ ಮಾಡಿದ ಪತ್ನಿ 

Views: 115

ಕನ್ನಡ ಕರಾವಳಿ ಸುದ್ದಿ: ವಿವಾಹಿತ ಮಹಿಳೆ ಹಾಗೂ ಆತನ ಪ್ರಿಯಕರ ಇಬ್ಬರು ಸೇರಿ ಮಹಿಳೆಯ ಪತಿಯನ್ನು ಉಸಿರುಕಟ್ಟಿಸಿ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಹರ್ಯಾಣದ ಹಿಸ್ಸಾರ್‌ನಲ್ಲಿ ನಡೆದಿದೆ.

ರವೀನಾ ಹಾಗೂ ಸುರೇಶ್‌ ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದು, ಬಳಿಕ ಇಬ್ಬರು ಜೊತೆಯಾಗಿ ರೀಲ್ಸ್ ಮಾಡಲು ಶುರು ಮಾಡಿದ್ದಾರೆ. ಆದರೆ ಇದಕ್ಕೆ ರವೀನಾಳ ಗಂಡ ಹಾಗೂ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿರೋಧವನ್ನು ಕ್ಯಾರೇ ಮಾಡದೇ ಕಳೆದ ಒಂದೂವರೆ ವರ್ಷದಿಂದಲೂ ಇವರು ಜೊತೆಯಾಗಿ ಕಂಟೆಂಟ್ ಕ್ರಿಯೇಟ್ ಮಾಡುವುದನ್ನು ಮುಂದುವರೆಸಿದ್ದಾರೆ.

ಶಾರ್ಟ್ ವಿಡಿಯೋಗಳು ಹಾಗೂ ಡಾನ್ಸ್ ರೀಲ್ಸ್‌ನಿಂದಾಗಿ ಈಕೆಗೆ ಇನ್ಸ್ಟಾಗ್ರಾಮ್‌ನಲ್ಲಿ 34,000 ಫಾಲೋವರ್ಸ್‌ಗಳಿದ್ದರು.ಅಲ್ಲದೇ ಇತರ ಕಲಾವಿದರ ಜೊತೆಗೆ ಸೇರಿ ಆಕೆ ಡಾನ್ಸ್ ಮಾಡಿದ್ದು ಅವುಗಳ ಹಲವು ವೀಡಿಯೋಗಳು ಯೂಟ್ಯೂಬ್‌ನಲ್ಲೂ ಇದ್ದವು. ರೀಲ್ಸ್ ಮಾಡುವ ಹುಚ್ಚು ಹಿಡಿಸಿಕೊಂಡಿದ್ದ ರವೀನಾ ಕುಟುಂಬದ ವಿರೋಧದ ನಡುವೆಯ ತನ್ನ ಇಷ್ಟದ ರೀಲ್ಸ್ ಕೆಲಸವನ್ನು ಮುಂದುವರೆಸಿದ್ದಳು. ಇದೇ ವಿಚಾರವಾಗಿ ಈಕೆಗೂ ಗಂಡನಿಗೂ ಆಗಾಗೇ ಜಗಳಗಳು ಆಗುತ್ತಿದ್ದವು.

ಈ ನಡುವೆ ಮಾರ್ಚ್ 25 ರಂದು ರವೀನಾ ಹಾಗೂ ಸುರೇಶ್ ನೋಡಬಾರದ ಸ್ಥಿತಿಯಲ್ಲಿ ರವೀನಾ ಪತಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದರಿಂದ ಗಂಡ ಹೆಂಡತಿ ನಡುವಣ ಜಗಳ ತಾರಕಕ್ಕೇರಿದೆ. ಇದಾದ ನಂತರ ಇಬ್ಬರೂ ಸೇರಿ 35 ವರ್ಷದ ಪ್ರವೀಣ್‌ನನ್ನು ಶಾಲಿನಿಂದ ಉಸಿರುಕಟ್ಟಿಸಿ ಹತ್ಯೆ ಮಾಡಿದ್ದಾರೆ. ಇತ್ತ ಪ್ರವೀಣ್ ಮನೆಯವರು ರವೀನಾ ಬಳಿ ಪತಿಯ ಬಗ್ಗೆ ಕೇಳಿದಾಗ ಆಕೆ ತನಗೆ ಏನೂ ಗೊತ್ತಿಲ್ಲ ಎಂಬುವಂತೆ ನಾಟಕವಾಡಿದ್ದಾಳೆ.

ಇದಾದ ನಂತರ ಅದೇ ದಿನ ರಾತ್ರಿ 2.30ರ ಸುಮಾರಿಗೆ ಇಬ್ಬರು ಸೇರಿ ಪ್ರವೀಣ್ ದೇಹವನ್ನು ಬೈಕ್‌ನಲ್ಲಿ ಇರಿಸಿಕೊಂಡು ಹೋಗಿ ಮನೆಯಿಂದ ಆರು ಕಿಲೋ ಮೀಟರ್ ದೂರದಲ್ಲಿರುವ ಚರಂಡಿಗೆ ಎಸೆದಿದ್ದಾರೆ. ಇತ್ತ ಮಾರ್ಚ್‌ 28ರಂದು ಪ್ರವೀಣ್‌ ಶವ ಕೊಳೆತ ಸ್ಥಿತಿಯಲ್ಲಿ ಪೊಲೀಸರಿಗೆ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಸುತ್ತಮುತ್ತಲ ಹಾಗೂ ರಸ್ತೆ ಬದಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.

 

Related Articles

Back to top button