ರಾಷ್ಟ್ರ ಮಟ್ಟದ ಟಿ-10 ಕ್ರಿಕೆಟ್ ಪಂದ್ಯಾಟಕ್ಕೆ ಕರ್ನಾಟಕ ತಂಡದ ಪ್ರತಿನಿಧಿಯಾಗಿ ಬಸ್ರೂರು-ಆನಗಳ್ಳಿಯ ಸೃಜನಾ ಪೂಜಾರಿ

Views: 245
ಕುಂದಾಪುರ: ಫೆಬ್ರವರಿ 19 ರಿಂದ 21 ರ ತನಕ ಹರಿಯಾಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಟಿ-10 ಮಹಿಳೆಯರ ಕ್ರಿಕೆಟ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಬಸ್ರೂರು ಆನಗಳ್ಳಿಯ ಸೃಜನಾ ಪೂಜಾರಿ ಇಂದು ತೆರಳಿದ್ದಾರೆ.
ಆಲ್ ಇಂಡಿಯಾ ಸ್ಪೋರ್ಟ್ಸ್ ಕೌನ್ಸಿಲ್ ಆಫ್ ಡೆಟ್ ಆಯೋಜಿಸುವ ಪ್ರಥಮ ರಾಷ್ಟ್ರಮಟ್ಟದ ಟಿ- 10 ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅವರು ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಕುಂದಾಪುರ ವಿಠಲವಾಡಿಯ ನಿವಾಸಿ ಸುಧಾಕರ್ ಪೂಜಾರಿ ಹಾಗೂ ಬಸ್ರೂರು ಸವಿತಾ ಪೂಜಾರಿ ಇವರ ಪುತ್ರಿಯಾಗಿರುತ್ತಾರೆ. ಪ್ರತಿಭಾನ್ವಿತೆಯಾಗಿರುವ ಈಕೆ ಚಿತ್ರಕಲೆ, ಕ್ರೀಡೆ,ಇನ್ನಿತರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಪ್ರಸ್ತುತ ಬ್ಯೂಟಿಷಿಯನ್ ಕೋರ್ಸ್ ಮಾಡುತ್ತಿದ್ದು ಈಕೆಯ ಸಾಧನೆಯನ್ನು ಹಲವಾರು ಸಂಘ-ಸಂಸ್ಥೆಗಳಲ್ಲಿ ಗುರುತಿಸಿ ಸನ್ಮಾನಿಸಿದ್ದಾರೆ. ಉನ್ನತ ಮಟ್ಟದ ಸಾಧನೆ ಮಾಡಿ ಕುಂದಾಪುರಕ್ಕೆ ಕೀರ್ತಿ ತನ್ನಿ ಎಂದು ಕುಂದಾಪುರ ಬಸ್ರೂರು ಅಭಿಮಾನಿಗಳು ಶುಭ ಹಾರೈಸಿದ್ದಾರೆ.