ಧಾರ್ಮಿಕ
ಮಾಲೀಕನ ಜೊತೆ ರಾಮನ ವಿಗ್ರಹವನ್ನು ಬಾಯಲ್ಲಿ ಕಚ್ಚಿಕೊಂಡು ಶ್ರೀರಾಮನ ದರ್ಶನ ಪಡೆದ ಶ್ವಾನ..!

Views: 113
ಮಂಡ್ಯ: ಮನೆಯ ಮಾಲಿಕನ ಜೊತೆಯಲ್ಲಿ ಶ್ವಾನವೊಂದು ಸುಮಾರು 4 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಬಂದು ಶ್ರೀ ರಾಮನ ದರ್ಶನ ಪಡೆದ ಅಪರೂಪದ ದೃಶ್ಯ ಮಂಡ್ಯದ ನೆಹರು ನಗರದ ರಾಮಮಂದಿರದಲ್ಲಿ ನಡೆದಿದೆ.
ಶ್ವಾನವು ಬಾಯಿಯಲ್ಲಿ ರಾಮ, ಸೀತೆ, ಲಕ್ಷ್ಮಣ ವಿಗ್ರಹ ಇರುವ ಬುಟ್ಟಿಯನ್ನು ಕಚ್ಚಿ ತಂದು ದರ್ಶನ ಪಡೆದಿದೆ.
ಮಂಡ್ಯದ ಸಂಜಯ್ ವೃತ್ತದಿಂದ ಮಹಾವೀರ ವೃತ್ತ, ಹೊಸಹಳ್ಳಿ ವೃತ್ತದ ಮೂಲಕ ನೆಹರು ನಗರದ ರಾಮಮಂದಿರದವರೆಗೆ ಕಾಲ್ನಡಿಗೆ ಜಾಥಾ ಮಾಡಿದೆ.
ಮಾಲೀಕ ಗೋಪಿನಾಥ್ ಎಂಬುವವರಿಗೆ ಸೇರಿದ ಶ್ವಾನ ಇದಾಗಿದ್ದು, ಶ್ರೀ ರಾಮನ ದರ್ಶನವನ್ನು ಶ್ವಾನ ಹಾಗೂ ಅದರ ಮಾಲೀಕರು ರಾಮಭಕ್ತಿಗೆ ಪಾತ್ರರಾಗಿದ್ದು ಎಲ್ಲೆಡೆ ವೈರಲ್ ಅಗಿದೆ.
ಅಯೋಧ್ಯೆಯಲ್ಲಿ ನಿನ್ನೆ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಾಮನ ಕೃಪೆಗೆ ಪಾತ್ರರಾಗಲೂ ರಾಮನಿದ್ದಲ್ಲಿಗೆ ಭಕ್ತಸಾಗರ ಹರಿದು ಬರುತ್ತಿದೆ.