ಇತರೆ

ಬಸ್ – ಕಾರು ಢಿಕ್ಕಿ: ಕುಂದಾಪುರ ನೆಂಪು ಮೂಲದ ವೆಬ್‌ ಡೆವಲಪರ್‌ ಮುಕೇಶ್‌ ಶೆಟ್ಟಿ ನಿಧನ 

Views: 121

ಕನ್ನಡ ಕರಾವಳಿ ಸುದ್ದಿ: ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ಖ್ಯಾತ ವೆಬ್‌ ಡೆವಲಪರ್‌, ಮ್ಯಾಕ್ಸ್ ಇನ್ಪೋಟೆಕ್‌‌ ಸಂಸ್ಥಾಪಕ ಕುಂದಾಪುರ ನೆಂಪು ಮೂಲದ ಮುಕೇಶ್‌ ಶೆಟ್ಟಿ(39) ಮೃತಪಟ್ಟಿದ್ದಾರೆ.ಇವರು ಮಂಗಳೂರಿನಲ್ಲಿ ಮ್ಯಾಕ್ಸ್ ಇನ್ಫೋಟೆಕ್ ಹಾಗೂ ಇನ್ನಿತರ ಸಂಸ್ಥೆಗಳನ್ನು ನಡೆಸುತ್ತಿದ್ದರು.

ಮಾರ್ಚ್‌ 5ರಂದು ಕುಂದಾಪುರದಿಂದ ಯಲ್ಲಾಪುರ ಮಾರ್ಗವಾಗಿ ಹುಬ್ಬಳಿಗೆ ತೆರಳುತ್ತಿದ್ದರು. ಆದರೆ ಯಲ್ಲಾಪುರ ತಾಲೂಕಿನ ಮಳಲಗಾಂವ ಬಳಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಎದುರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರು ಮುಖಾಮುಖಿ ಢಿಕ್ಕಿಯಾಗಿದೆ.

ಅಪಘಾತದಲ್ಲಿ ಗಾಯಗೊಂಡ ಅವರನ್ನು ಯಲ್ಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮುಖೇಶ್ ಶೆಟ್ಟಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರು.

 

Related Articles

Back to top button
error: Content is protected !!