ಶಿಕ್ಷಣ

ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ ಇಂಗ್ಲಿಷ್ ಫೆಸ್ಟ್ ಸಂಪನ್ನ

Views: 243

ಕನ್ನಡ ಕರಾವಳಿ ಸುದ್ದಿ:ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಇಂಗ್ಲಿಷ್ ಫೆಸ್ಟ್ ಕಾರ್ಯಕ್ರಮವನ್ನು ನಿವೃತ್ತ ಆಂಗ್ಲಭಾಷಾ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಅವರು ಕಾರ್ಯಕ್ರಮವನ್ನು ವಿಶಿಷ್ಟವಾಗಿ ತೆರೆದುಕೊಳ್ಳುವ ಇಂಗ್ಲಿಷ್ ಫೆಸ್ಟ್ ಎಂಬ ಪದಗಳ ಫಲಕವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು. 

ಬಳಿಕ ಮಾತನಾಡಿದ ಅವರು ಇಂಗ್ಲಿಷ್ ಮಾತ್ರ ಬಳಸಿಕೊಂಡು ನಡೆಸುವ ವಿವಿಧ ಚಟುವಟಿಕೆ ಹಾಗೂ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಒಳಗೊಳ್ಳುವಂತೆ ಮಾಡುವುದರಿಂದ ಅವರಲ್ಲಿ ಭಾಷಾ ಕೌಶಲ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ಶ್ರಮಪಟ್ಟು ರೂಪಿಸಿದ ಕಾರ್ಯಕ್ರಮ ಸಾರ್ಥಕವಾಗಲಿದೆ ಎಂದರು.

ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ ಶ್ಯಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿದ್ದ ಸ್ಥಳೀಯ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಂ. ಭಾಸ್ಕರ ಮಯ್ಯ ಶುಭ ಹಾರೈಸಿದರು. ಬ್ರಹ್ಮಾವರ ವಲಯ ಸಂಪನ್ಮೂಲ ವ್ಯಕ್ತಿ ಉದಯ ಕೋಟ ಶಿಕ್ಷಕರು ಇಂಗ್ಲಿಷ್ ಭಾಷೆಯಲ್ಲಿ ಸಂವಹನ ತರಗತಿಗಳನ್ನು ನಡೆಸುವ ಬಗ್ಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳಿಂದ ವಿವಿಧ ಕಲಿಕಾ ಪೂರಕ ಚಟುವಟಿಕೆಗಳು, ಪ್ರಹಸನ ನಡೆದುವು. 

ವಿದ್ಯಾರ್ಥಿನಿ ಸಂಚಿತಾ ಸ್ವಾಗತಿಸಿದರು. ಶಿಕ್ಷಕಿ ನಿರ್ಮಲಾ ಪಟಗಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ವಿಜೇತಾ ಕಾರ್ಯಕ್ರಮದ ಪೂರ್ವದಲ್ಲಿ ನಡೆದಿದ್ದ ಸ್ಪರ್ಧೆಗಳ ವಿಜೇತರ ಹೆಸರು ಓದಿದರು. ಅನ್ವಿತ್ ವಂದಿಸಿದರು ಭುವನ್ ಮತ್ತು ಪೌರ್ಣಮಿ ನಿರೂಪಿಸಿದರು. ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶಾರದಾ, ಮುಖ್ಯೋಪಾಧ್ಯಾಯ ಸೀತಾರಾಮ, ವಿದ್ಯಾರ್ಥಿ ನಾಯಕ ಪ್ರತೀಕ್, ಪೋಷಕರು ಇದ್ದರು. ನಿರ್ಮಲಾ ಪಟಗಾರ್, ಶಶಿಕಲಾ ಮತ್ತು ಎಲ್ಲ ಶಿಕ್ಷಕ, ಶಿಕ್ಷಕಿಯರು ಚಟುವಟಿಕೆಗಳನ್ನು ರೂಪಿಸಿದ್ದರು. 

Related Articles

Back to top button