ಆರೋಗ್ಯ

ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್: ಅಂತರಾಷ್ಟ್ರೀಯ ಯೋಗ ದಿನಾಚರಣೆ

Views: 154

ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣ  ಮದರ್ ತೆರೇಸಾ ಮೆಮೋರಿಯಲ್ ಶಾಲೆಯಲ್ಲಿ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ  ದಿನವನ್ನು ಆಚರಿಸಲಾಯಿತು.

ಶಾಲೆಯ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಂಸ್ಥೆಯಿಂದ ನೀಡಲಾಗಿರುವ ಯೋಗದ ಸಮವಸ್ತ್ರದಲ್ಲಿ ಶಿಸ್ತು ಬದ್ಧರಾಗಿ ಭಾಗವಹಿಸಿದ್ದು, ಇದೇ ಸಂಸ್ಥೆಯ ಉಪ ಮುಖ್ಯೋಪಾಧ್ಯಾಯರು ಹಿರಿಯ ಶಿಕ್ಷಕರು ಹಾಗೂ ರಾಜ್ಯಮಟ್ಟದ ಯೋಗ ಪರಿಣಿತರಾದ ಸಂತೋಷ್ ಕುಮಾರ್ ಹಾಗೂ ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಶಾಲೆಯ ದೈನಂದಿನ ತರಗತಿಗಳಲ್ಲಿ ಯೋಗ ಅಭ್ಯಾಸವನ್ನು ನೀಡುತ್ತಿರುವ ಶ್ರೀಮತಿ ಜಯಲಕ್ಷಿ ಯೋಗ ಶಿಕ್ಷಕರು ಇವರು ವಿದ್ಯಾರ್ಥಿಗಳಿಗೆ ವಿವಿಧ ಆಸನಗಳನ್ನು ಮಾಡಿಸುವ ಮೂಲಕ ಅವರಿಗೆ ಯೋಗದ ಮಹತ್ವವನ್ನು ಅದರ ಪರಿಣಾಮವನ್ನು ತಿಳಿಸಿಕೊಟ್ಟರು. ಯೋಗವು ಸ್ವಯಂ ಅನ್ವೇಷಣೆ ಮತ್ತು ಸ್ವಯಂ ಸುಧಾರಣೆಯ ಒಂದು ಮಾರ್ಗ ಎಂಬುದರ ಅರಿವು ಮೂಡಿಸಿದರು.ಹಾಗೂ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ತಮ್ಮ ದೈನಂದಿನ ತರಗತಿಗಳಲ್ಲಿ ಮಾಡುವ ಯೋಗಭ್ಯಾಸದಿಂದ ಆಗುವ ಉಪಯುಕ್ತತೆಯ ಬಗ್ಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಹಾಗೂ ಎಲ್ಲಾ ಶಿಕ್ಷಕರು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.

Related Articles

Back to top button