ಧಾರ್ಮಿಕ
ಮಂಗಳೂರಿನ ಕೊಟ್ಟಾರದ ಪ್ರಮುಖ ರಸ್ತೆಗಳಲ್ಲಿ ಪ್ರೇತ ಉಚ್ಚಾಟನೆಗಾಗಿ ರಸ್ತೆ ಸಂಚಾರ ಬಂದ್!

Views: 156
ಮಂಗಳೂರು, ನಗರದಲ್ಲಿ ಪ್ರೇತ ಉಚ್ಚಾಟನೆ ಹಿನ್ನೆಲೆ ರಸ್ತೆ ಸಂಚಾರ ಬಂದ್ ಮಾಡಿರುವಂತಹ ಘಟನೆ ನಡೆದಿದೆ. ಕೊಟ್ಟಾರದ ಮಹಾದೈವರಾಜ ಕೋಟೆದ ಬಬ್ಬುಸ್ವಾಮಿ ದೈವಸ್ಥಾನ, ರಣಕಾಳಿ ಹಾಗೂ ಬ್ರಹ್ಮರಾಕ್ಷಸ ಅನ್ಯಪ್ರೇತ ಉಚ್ಚಾಟನೆ ಹಿನ್ನೆಲೆ ಕೊಟ್ಟಾರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮಾಡದಂತೆ ಬ್ಯಾನರ್ ಅಳವಡಿಸಿದ್ದು, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 3 ಗಂಟೆಯವರೆಗೆ ಜನರು ಓಡಾಡದಂತೆ ಮನವಿ ಮಾಡಲಾಗಿದೆ. ಸದ್ಯ ಪ್ರೇತ ಉಚ್ಚಾಟನೆ ಬ್ಯಾನರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೈವಸ್ಥಾನ ಜೀರ್ಣೋದ್ಧಾರ ಮಾಡಲು ತಾಂಬೂಲ ಪ್ರಶ್ನೆ ಕೇಳಲಾಯಿತು. ಆಗ ಇಲ್ಲಿ ಬ್ರಹ್ಮರಾಕ್ಷಸ, ಪ್ರೇತಾತ್ಮಗಳಿರುವುದು ಕಂಡು ಬಂದಿತ್ತು. ಜೀರ್ಣೋದ್ಧಾರಕ್ಕೂ ಮೊದಲು ಉಚ್ಚಾಟನೆ ಆಗಬೇಕು ಅಂತಾ ಬಂದಿತ್ತು. ಪ್ರೇತ ಉಚ್ಚಾಟನೆ ವೇಳೆ ಜನ ಸಂಚಾರವಾದರೆ ತೊಂದರೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಆಯೋಜಕರು. ಮಂಗಳೂರು ಪೊಲೀಸ್ ಇಲಾಖೆಗೂ ಮನವಿ ಮಾಡಿದ್ದಾರೆ.