ಬಾರ್ಕೂರು: ಸ್ವಾಮಿ ಕೃಷ್ಣಾನಂದಗಿರಿ ಮಿನಿ ಸಭಾಭವನ ಹಾಗೂ ಭದ್ರತಾ ಕೊಠಡಿ ಉದ್ಘಾಟನೆ

Views: 200
ಕನ್ನಡ ಕರಾವಳಿ ಸುದ್ದಿ: ಬಾರ್ಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೃಷ್ಣಾನಂದಗಿರಿ ಮಿನಿ ಸಭಾಭವನ ಹಾಗೂ ಭದ್ರತಾ ಕೊಠಡಿಯನ್ನು ಪೇಜಾವರ ಮಠದ ಪರಮ ಪೂಜ್ಯ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಫೆಬ್ರವರಿ 15ರಂದು ಶನಿವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಬದುಕು ಹಸನವಾಗಬೇಕಾದರೆ ನಮ್ಮ ಪ್ರಯತ್ನ ದೇವರ ಅನುಗ್ರಹ ದೊರೆತಾಗ ಬದುಕಿನಲ್ಲಿ ಸಂಪತ್ತು, ಜಯ,ಕೀರ್ತಿ ಪಡೆಯಲು ಸಾಧ್ಯ ಜೀರ್ಣೋದ್ಧಾರ ಎಂದರೆ ಕೇವಲ ಕಟ್ಟಡ ನಿರ್ಮಾಣ ಅಲ್ಲ ಅದು ಒಟ್ಟು ಸಮಾಜದ ಜೀರ್ಣೋದ್ಧಾರ.
ಪದ್ಮಶಾಲಿ ಸಮಾಜ ಇನ್ನೂ ಎತ್ತರ ಏರಬೇಕಾದರೆ ಸಮಾಜದ ಬುನಾದಿ ಭದ್ರವಾಗಿರಬೇಕು. ನಾವು ಎಲ್ಲೇ ಇದ್ದರೂ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ನಾವು ನಂಬಿದ ಮೂಲ ಕ್ಷೇತ್ರವನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಉದ್ಯಮಿಗಳಾದ ಶ್ರೀಮತಿ ಮತ್ತು ಶ್ರೀ ರವೀಂದ್ರ ಶೆಟ್ಟಿಗಾರ ಮತ್ತು ಮಕ್ಕಳು ಕೊಡುಗೆಯಾಗಿ ನೀಡಿದ ಭದ್ರತಾ ಕೊಠಡಿ ಮತ್ತು ಶ್ರೀಮತಿ ನರ್ಸಿ ಮತ್ತು ಶ್ರೀ ಕೃಷ್ಣ ಶೆಟ್ಟಿಗಾರ್ ಚೇರ್ಕಾಡಿ ಮತ್ತು ಮಕ್ಕಳು ಸ್ಮರಣಾರ್ಥ ಶ್ರೀಮತಿ ಕವಿತಾ ಜೆ ಎಸ್ ಮತ್ತು ಡಾ. ಜಯರಾಮ್ ಶೆಟ್ಟಿಗಾರ ಮತ್ತು ಮಕ್ಕಳು ಸಂತೆಕಟ್ಟೆ ಇವರು ಕೊಡುಗೆಯಾಗಿ ನೀಡಿದ ಸ್ವಾಮಿ ಕೃಷ್ಣಾನಂದಗಿರಿ ಮಿನಿ ಸಭಾಭವನವನ್ನು ಶ್ರೀಗಳು ಉದ್ಘಾಟಿಸಿದರು.
ವೇದಿಕೆಯಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಾರ್ಕೂರು ರಂಗನಕೆರೆ ಶ್ರೀನಿವಾಸ ಶೆಟ್ಟಿಗಾರ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಚ್ ಎ ಗೋಪಾಲ್, ವೇದಮೂರ್ತಿ ರಮೇಶ್ ಭಟ್, ನಾರಾಯಣ ಶೆಟ್ಟಿಗಾರ್ ಸುರತ್ಕಲ್, ಉಪಸ್ಥಿತರಿದ್ದರು.
ದೇವಳದ ಆಡಳಿತ ಮೊಕ್ತೇಸರರಾದ ಡಾ.ಜಯರಾಮ ಶೆಟ್ಟಿಗಾರ್ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಶಿವಪ್ರಸಾದ್ ಕೆ ಉಡುಪಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಸಮಿತಿಯ ಗೌರವಾಧ್ಯಕ್ಷ ಪುರುಷೋತ್ತಮ್ ಶೆಟ್ಟಿಗಾರ್ ಮಣಿಪಾಲ್ ವಂದಿಸಿದರು.