ಬಾಡಿಗೆ ಮನೆ ವಾಸಿಗಳಿಗೆ ಸರ್ಕಾರ ಗುಡ್ ನ್ಯೂಸ್ ಮನೆ ಬದಲಾಯಿಸಿದರೆ ಬಿಲ್ ಕಟ್ಟಲು ಸರ್ಕಾರದ ಆದೇಶವೇನು?

Views: 69
ಬೆಂಗಳೂರು: ಬಾಡಿಗೆ ಮನೆ ವಾಸಿಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ಮನೆ ಬದಲಾಯಿಸಿದ್ರೂ ಗೃಹಜ್ಯೋತಿ ಲಾಭ ಸಿಗಲಿದೆ. ಬಾಡಿಗೆದಾರರಿಗೆ ಸಹಾಯವಾಗುವಂತೆ ಕೆಲ ಬದಲಾವಣೆ ಮಾಡಲಾಗಿದೆ.
ಈ ಹಿಂದೆ ಬಾಡಿಗೆ ಮನೆ ನೋಂದಣಿ ಕ್ಯಾನ್ಸಲ್ಗೆ ಅಲೆದಾಡಬೇಕಿತ್ತು. ಕಚೇರಿಗೆ ಅಲೆದು ಅಲೆದು ಹೈರಾಣಾಗ್ತಿದ್ದರು ಬಾಡಿಗೆದಾರರು. ಈಗ ಸೇವಾಸಿಂಧು ಮೂಲಕ ನೋಂದಣಿ ರದ್ದಿಗೆ ಅವಕಾಶ ಮಾಡಿಕೊಳಡಲಾಗಿದೆ.
ಸರ್ಕಾರದ ಹೊಸ ಆದೇಶದಲ್ಲಿ ಏನಿದೆ..?
ಗೃಹಜ್ಯೋತಿ ಉಚಿತ ವಿದ್ಯುತ್ಗೆ ಬಾಡಿಗೆದಾರರ ನೋಂದಣಿ
ಆಧಾರ್ ನಂಬರ್ ನೀಡಿ ನೋಂದಣಿ ಮಾಡಿಕೊಳ್ಳುತ್ತಿದ್ದ ಜನರು
ಮನೆಯನ್ನ ಖಾಲಿ ಮಾಡುವಾಗ ಹಳೆ ಮನೆ ನೋಂದಣಿ ರದ್ದು
ನೋಂದಣಿಯನ್ನು ರದ್ದುಗೊಳಿಸಲು ಬಾಡಿಗೆದಾರರ ಪರದಾಟ
ಹಳೆ ನೋಂದಣಿ ರದ್ದಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಟ
ಸದ್ಯ ಸೇವಾ ಸಿಂಧು ಪೋರ್ಟಲ್ ಮೂಲಕವೇ ನೋಂದಣಿ ರದ್ದು
ನೋಂದಣಿ ರದ್ದು ಮಾಡಿಕೊಳ್ಳಲು ಅವಕಾಶ ನೀಡಿರೋ ಸರ್ಕಾರ
ಹೊಸ ಬಾಡಿಗೆ ಮನೆಗೆ ಸುಲಭವಾಗಿ ನೋಂದಣಿಗೂ ಸೌಲಭ್ಯ
ಈ ಪ್ರಕ್ರಿಯೆಗಾಗಿ ಇಂಧನ ಇಲಾಖೆಯಿಂದ De-Link ಅವಕಾಶ ನೀಡಿದೆ.