ರೈಲ್ವೆ ಇಲಾಖೆಯಲ್ಲಿ 5000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Views: 72
ಕನ್ನಡ ಕರಾವಳಿ ಸುದ್ದಿ: ಪಶ್ಚಿಮ ರೈಲ್ವೆ 5,000ಕ್ಕೂ ಹೆಚ್ಚು ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ.
ಈಗ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rrc-wr.comಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲನೆಯದಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
ಇದರ ನಂತರ ನೀವು ಮುಖಪುಟದಲ್ಲಿರುವ ಸಂಬಂಧಿತ ಲಿಂಕ್ ಕ್ಲಿಕ್ ಮಾಡಬೇಕಾಗುತ್ತದೆ.
ಈಗ ಒಂದು ಪ್ರತ್ಯೇಕ ವಿಂಡೋ ತೆರೆಯುತ್ತದೆ.
ಈಗ ಅಭ್ಯರ್ಥಿಗಳು ಮೊದಲು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.
ನೋಂದಣಿ ಪೂರ್ಣಗೊಂಡ ನಂತರ ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಯನ್ನ ಭರ್ತಿ ಮಾಡಬೇಕು.
ಇದರ ನಂತರ ಫಾರ್ಮ್ ಅನ್ನ Submit ಮಾಡಬೇಕು
ನಂತರ ಅಭ್ಯರ್ಥಿಗಳು ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಕೊನೆಯದಾಗಿ ಅಭ್ಯರ್ಥಿಗಳು ಪ್ರಿಂಟ್‌ಔಟ್ ತೆಗೆದುಕೊಳ್ಳಬೇಕು.
ಅರ್ಜಿ ಶುಲ್ಕ: ಈ ನೇಮಕಾತಿಗೆ ಅರ್ಜಿ ಸಲ್ಲಿಸುವ SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಉಳಿದ ಎಲ್ಲಾ ಅಭ್ಯರ್ಥಿಗಳು ₹100 ಅರ್ಜಿ ಶುಲ್ಕವನ್ನ ಪಾವತಿಸಬೇಕು. ಸ್ರ್ಕೀನ್ ಮೇಲೆ ವಿನಂತಿಸಿದ ಮಾಹಿತಿ ಒದಗಿಸುವ ಮೂಲಕ ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/UPI/ಇಂಟರ್ನೆಟ್ ಬ್ಯಾಂಕಿಂಗ್ ಇತ್ಯಾದಿಗಳನ್ನ ಬಳಸಿಕೊಂಡು ಪಾವತಿ ಮಾಡಬಹುದು. ಆನ್‌ಲೈನ್ ಪಾವತಿಗೆ ಯಾವುದೇ ವಹಿವಾಟು ಶುಲ್ಕವನ್ನು ಅರ್ಜಿದಾರರು ಭರಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಪಶ್ಚಿಮ ರೈಲ್ವೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.






