ಜನಮನ

ಪೊಲೀಸ್ ಠಾಣೆಯಲ್ಲೇ ಬಿಂದಾಸಾಗಿ ಇಸ್ಪಿಟ್ ಆಟ: ಎಎಸ್‌ಐ ಸೇರಿ ಐವರು ಸಸ್ಪೆಂಡ್!

Views: 152

ಕನ್ನಡ ಕರಾವಳಿ ಸುದ್ದಿ: ಕಲಬುರಗಿ, ವಾಡಿ ಪೊಲೀಸ್ ಠಾಣೆಯಲ್ಲಿ ಇಸ್ಪಿಟ್ ಆಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎ.ಎಸ್.ಐ ಸೇರಿದಂತೆ ಐವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಆದೇಶ ಹೊರಡಿಸಿದ್ದಾರೆ.

ಎ.ಎಸ್.ಐ ಮೆಹಮೂದ್ ಮಿಯಾ, ಹೆಡ್ ಕಾನ್ ಸ್ಟೇಬಲ್‌ಗಳಾದ ನಾಗರಾಜ್, ಸಾಯಬಣ್ಣ , ಇಮಾಮ್ ಹಾಗೂ ಪೇದೆ ನಾಗಭೂಷಣ ಅಮಾನತುಗೊಂಡವರು. ಈ ಐವರಿಗೂ ಎಸ್ಪಿ ಶ್ರೀನಿವಾಸಲು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.

ಈ ಮಧ್ಯೆ, ಠಾಣೆಯ ಪಿ.ಎಸ್.ಐ ತಿರುಮಲೇಶ್ ಅವರಿಗೂ ಎಸ್ಪಿ ಶ್ರೀನಿವಾಸಲು ನೋಟಿಸ್ ಜಾರಿ ಮಾಡಿ ನಿಗದಿತ ಸಮಯದಲ್ಲಿ ಉತ್ತರಿಸುವಂತೆ ಲಿಖಿತವಾಗಿ ತಾಕೀತು ಮಾಡಿದ್ದಾರೆ.

ಚಿತ್ತಾಪುರ ತಾಲೂಕಿನ ವಾಡಿ ಪೊಲೀಸ್ ಠಾಣೆಯಲ್ಲಿ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಮೇಲಾಗಿ, ಪೊಲೀಸ್ ಸಿಬ್ಬಂದಿ ಠಾಣೆಯಲ್ಲೇ ಬಿಂದಾಸಾಗಿ ಇಸ್ಪಿಟ್ ಆಡುತ್ತಿರುವ ವಿಡಿಯೋ ವೈರಲ್ ಆಗಿದ್ದರಿಂದ ರಾಜ್ಯಾದ್ಯಂತ ಈ ಪ್ರಕರಣ ಗಮನ ಸೆಳೆದಿತ್ತು. ಹೀಗಾಗಿ, ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಎಸ್ಪಿ ಶ್ರೀನಿವಾಸಲು ಮಿಂಚಿನ ವೇಗದಲ್ಲಿ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ಗಮನ ಸೆಳೆದಿದ್ದಾರೆ.

Related Articles

Back to top button
error: Content is protected !!