ಇತರೆ

ಮನೆ ಮುಂದೆ ಆಟವಾಡುತ್ತಿದ್ದ ಮಗುವಿಗೆ ನಾಗರ ಹಾವು ಕಚ್ಚಿ ಸಾವು 

Views: 121

ಕನ್ನಡ ಕರಾವಳಿ ಸುದ್ದಿ:ಸಾಗರದ ಎಸ್ ಎನ್ ನಗರದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಎರಡುವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.

ಗಣೇಶ್ ಅವರ ಪುತ್ರ ಭವಿನ್ ಮೃತಪಟ್ಟ ಗಂಡು ಮಗು ಎಂದು ತಿಳಿದು ಬಂದಿದೆ.

ರಜೆ ಹಿನ್ನಲೆಯಲ್ಲಿ ಕುಟುಂಬ ಅಜ್ಜಿ ಮನೆಗೆ ಬಂದಿದ್ದು,ಮನೆ ಮುಂದೆ ಆಟವಾಡುತ್ತಿದ್ದ ಮಗವಿನ ಕೈಗೆ ನಾಗರಹಾವು ಕಚ್ಚಿದೆ ಎನ್ನಲಾಗಿದೆ.

ತಕ್ಷಣ ಮಗುವನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ದಾಖಲಿಸಲಾಗಿತ್ತು.

ಮಗು ಭವಿನ್ ಸಂಜೆ ವೇಳೆಗೆ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.

 

Related Articles

Back to top button
error: Content is protected !!