ಜನಮನ

ಮೊದಲ ರಾತ್ರಿ ಮುಸುಕು ತೆಗೆಯ ಬೇಕಾದರೆ ಗಂಡನಿಗೆ 90 ಲಕ್ಷ ರೂ.ವಿಶಿಷ್ಟ ಬೇಡಿಕೆಯಿಟ್ಟ ಮದುಮಗಳು! 

Views: 106

ಕನ್ನಡ ಕರಾವಳಿ ಸುದ್ದಿ: ಉತ್ತರ ಪ್ರದೇಶದ ಆಗ್ರಾದಲ್ಲಿ ವಧುವೊಬ್ಬಳು ತನ್ನ ಮದುವೆಯ ಮೊದಲ ರಾತ್ರಿ ಗಂಡನಿಗೆ ವಿಶಿಷ್ಟ ಬೇಡಿಕೆಯಿಟ್ಟಿದ್ದಾಳೆ. ಮುಖಕ್ಕೆ ಹಾಕಿರುವ ಮುಸುಕು ತೆಗೆಯಬೇಕೆಂದರೆ 90 ಲಕ್ಷ ರುಪಾಯಿ ಕೊಡಬೇಕೆಂದು ಆಗ್ರಹಿಸಿದ್ದಾಳೆ. ಪತಿ 90 ಲಕ್ಷ ರುಪಾಯಿ ನೀಡುವವರೆಗೂ ಆತನೊಂದಿಗೆ ಯಾವುದೇ ರೀತಿಯ ದೈಹಿಕ ಸಂಬಂಧ ಹೊಂದಲು ಪತ್ನಿ ನಿರಾಕರಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ

ಆಗ್ರಾ ನಿವಾಸಿಗಳಾದ ಗೌರವ್ ಮತ್ತು ಕಲ್ಪನಾ ಸುಮಾರು ಒಂದು ವರ್ಷದ ಹಿಂದೆ ಏಪ್ರಿಲ್ 29ರಂದು ವಿವಾಹವಾದರು. ಆದರೆ ಫಸ್ಟ್‌ ನೈಟ್‌ ಒಂದು ದಿನವೂ ನಡೆಯಲಿಲ್ಲ. ಗೌರವ್‌ನ ಸಹೋದರಿ ಮುಸ್ಕಾನ್ ಸಲ್ಲಿಸಿದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಕಾರ, ಕಲ್ಪನಾ ತನ್ನ ಪತಿಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ನಿರಾಕರಿಸಿದ್ದಾಳೆ. ಬದಲಾಗಿ ಆತನನ್ನು ಅವಮಾನಿಸಿದ್ದಾಳೆ.

ಕಲ್ಪನಾ ಸಹೋದರರೊಂದಿಗೆ ಸೇರಿ ತನ್ನ ಎಲ್ಲ ಮತ್ತು ಅತ್ತೆಯ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಆರೋಪಿಸಲಾಗಿದೆ. ಅಲ್ಲದೆ ಕಲ್ಪನಾ ಪತಿ ಗೌರವ್ ಮತ್ತು ಆತನ ಕುಟುಂಬದ ಮೇಲೆ 90 ಲಕ್ಷ ರುಪಾಯಿ ನೀಡುವಂತೆ ಪದೇ ಪದೇ ಒತ್ತಡ ಹೇರುತ್ತಿದ್ದಳು ಎನ್ನಲಾಗಿದೆ.

ಜುಲೈ ಮೊದಲ ವಾರದಲ್ಲಿ ಕಲ್ಪನಾ ತನ್ನ ಹೆತ್ತವರ ಮನೆಗೆ ತೆರಳಿ, 90 ಲಕ್ಷ ರುಪಾಯಿ ಕೊಡಿ ಇಲ್ಲದಿದ್ದರೆ ಸಾಯಲು ಸಿದ್ಧನಾಗು ಎಂದು ಬೆದರಿಕೆ ಹಾಕಿದ್ದಳು. ಅಂದಿನಿಂದ ಅವಳು ಹಿಂತಿರುಗಿಲ್ಲ ಎಂದು ಗೌರವ್‌ ಹೇಳಿದ್ದಾನೆ. ಕಲ್ಪನಾ ಕುಟುಂಬವು ಗೌರವ್ ಕುಟುಂಬವನ್ನು ಜೀವಂತವಾಗಿ ಸುಡುವುದಾಗಿ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಲಾಗಿದೆ.

ಸೆಪ್ಟೆಂಬರ್ 3ರಂದು ಕಲ್ಪನಾ ಸಹೋದರ ರಾಹುಲ್ ತನ್ನ ತಂದೆಯ ಬ್ಯಾಂಕ್ ವಿವರಗಳನ್ನು ಕಳುಹಿಸಿ, ತಾವು ಕೇಳಿದ ಮೊತ್ತವನ್ನು ಕೊಡುವಂತೆ ದುಂಬಾಲು ಬಿದ್ದಿದ್ದ. ಅಲ್ಲದೆ ಮಾರ್ಚ್ 25ರಂದು ಕಲ್ಪನಾ ತನ್ನ ತಂದೆ (ನರೇಂದ್ರ), ಸಹೋದರರು (ವಿಕಾಸ್ ಮತ್ತು ರಾಹುಲ್) ಹಾಗೂ ಆಕೆಯನ್ನು ಮದುವೆಯಾಗಲಿರುವ ಮುನ್ನಾ ಮಾಸ್ಟರ್‌ನೊಂದಿಗೆ ಗೌರವ್ ಮನೆಗೆ ದಾಳಿ ಇಟ್ಟಿದ್ದರು. ಕುಟುಂಬವನ್ನು ಒಳಗೆ ಕೂಡಿಹಾಕಿ ನಿಂದನೆ ಮಾಡಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.

ಗೌರವ್ ಬದುಕಲು ಬಯಸಿದರೆ 90 ಲಕ್ಷ ರುಪಾಯಿ ವ್ಯವಸ್ಥೆ ಮಾಡುವಂತೆ ಕಲ್ಪನಾ ಕುಟುಂಬವು ಗಡುವು ಕೂಡ ನೀಡಿತ್ತು ಎನ್ನಲಾಗಿದೆ. ಗೌರವ್ ತಂದೆ ಉಮ್ಮದ್ ಸಿಂಗ್ 67 ವರ್ಷದವರಾಗಿದ್ದು, ಅವರು ಹೃದ್ರೋಗ ಮತ್ತು ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರನ್ನೂ ಅವಮಾನಿಸಲಾಗಿದೆ. ಇಂಥವರು ಇದ್ದರೆಷ್ಟು, ಸತ್ತರೆಷ್ಟು ಎಂದೆಲ್ಲ ತೆಗಳಿದ್ದಾರೆ ಎಂಡು ಕುಟುಂಬಸ್ಥರು ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಆರೋಪಿಗಳು ಮನೆಯಲ್ಲಿ ಅಳವಡಿಸಲಾದ ಪೈಪ್ಡ್ ನೈಸರ್ಗಿಕ ಅನಿಲ (ಪಿಎನ್‌ಜಿ) ಸಂಪರ್ಕವನ್ನು ತಿರುಚಿ, ಘಟನೆಯನ್ನು ಅಪಘಾತವೆಂದು ಬಿಂಬಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕೊನೆಗೂ ಪೊಲೀಸರು ಧಾವಿಸಿ ಗೌರವ್‌ ಕುಟುಂಬವನ್ನು ರಕ್ಷಿಸಿತು.

ಕಲ್ಪನಾ ಮತ್ತು ಆಕೆಯ ಕುಟುಂಬದವರು ಆಗಾಗ ತಮ್ಮ ಮನೆಯ ಸುತ್ತಲೂ ಓಡಾಡುತ್ತಾ, ಬೆದರಿಕೆ ಹಾಕುತ್ತಾ ಭಯದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ ಎಂದು ಗೌರವ್‌ ಆರೋಪಿಸಿದ್ದಾನೆ. ಮುನ್ನಾ ಮಾಸ್ಟರ್, ಹಣ ಸುಲಿಗೆ ಮಾಡಲು ಉದ್ದೇಶಪೂರ್ವಕ ಪಿತೂರಿ ನಡೆಸಿದ್ದಾಗಿ ಒಪ್ಪಿಕೊಂಡಿರುವುದಾಗಿ ಎಂದು ಹೇಳಲಾಗಿದೆ. ಸದ್ಯ ಪೊಲೀಸ್ ತನಿಖೆ ನಡೆಯುತ್ತಿದೆ.

Related Articles

Back to top button
error: Content is protected !!