ಯುವಜನ
ಪುತ್ತೂರು:ವಿದ್ಯಾರ್ಥಿಗಳ ಪ್ರೀತಿ ಪ್ರೇಮವು ಪ್ರಣಯಕ್ಕೆ ತಿರುಗಿ ಪ್ರೇಯಸಿ ಗರ್ಭವತಿ:ದೂರು ದಾಖಲು

Views: 303
ಕನ್ನಡ ಕರಾವಳಿ ಸುದ್ದಿ:ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ನಡುವಿನ ಸುದೀರ್ಘ ಕಾಲದ ಪ್ರೇಮ ವಿವಾದಾತ್ಮಕ ತಿರುವು ಪಡೆದಿದೆ. ಇದೀಗ ವಿದ್ಯಾರ್ಥಿನಿ ಗರ್ಭವತಿಯಾಗಿದ್ದು ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪುತ್ತೂರಿನ ಯುವಕ ಎಂಜಿನಿಯರಿಂಗ್ ಓದುತ್ತಿದ್ದು, ಅನೇಕ ವರ್ಷಗಳಿಂದ ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎಂದು ತಿಳಿದುಬಂದಿದೆ. ಪ್ರೀತಿ ಪ್ರೇಮವು ಪ್ರಣಯಕ್ಕೆ ತಿರುಗಿದ ಪರಿಣಾಮ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಲೇ ಹುಡುಗಿ ಕಡೆಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು ವಿದ್ಯಾರ್ಥಿಯ ಹೆತ್ತವರನ್ನು ಕರೆದು ಮಾಹಿತಿ ಪಡೆದುಕೊಂಡಿದ್ದಾರೆ. ಈ ವಿಷಯ ಭಾರಿ ಸಂಚಲನ ಉಂಟು ಮಾಡುತ್ತಿದ್ದಂತೆ ಕೆಲ ಪ್ರಮುಖರ ಮಧ್ಯಸ್ಥಿಕೆಯಲ್ಲಿ ರಾಜಿ ಪಂಚಾಯಿತಿ ನಡೆದಿದೆ.
ಎರಡೂ ಮನೆಯವರ ನಡುವೆ ನಡೆದ ಹುಡುಗ-ಹುಡುಗಿ ಮಾತುಕತೆಯಲ್ಲಿ ಪರಸ್ಪರ ಮದುವೆಯಾಗಲು ಸಮ್ಮತಿ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.