ಇತರೆ
ನೀರಿನಲ್ಲಿ ಮುಳುಗಿ ಇಬ್ಬರು ಸಾವು

Views: 1
ಕುಮಟಾ ತಾಲೂಕಿನ ಬೆಟ್ಟುಳ್ಳಿ ಗ್ರಾಮದಲ್ಲಿ ಗದ್ದೆಯಲ್ಲಿ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.
ಬೆಟ್ಟುಳ್ಳಿ ಗ್ರಾಮದ ಸತೀಶ್ ನಾಯಕ್ (39) ಉಲ್ಲಾಸ್ ಗಾವಡಿ (60) ಮೃತಪಟ್ಟವರು.
ಸತೀಶ್ ಅವರಿಗೆ ಸೇರಿದ್ದ ಗದ್ದೆಗೆ ಬೇಲಿ ಹಾಕಲು ತೆರಳಿದ್ದಾಗ ಘಟನೆ ಸಂಭವಿಸಿದೆ.
ಅಘನಾಶಿನಿ ನೀರು ಮಟ್ಟ ಏರಿಕೆಯಾಗಿ ಗದ್ದೆಯಲ್ಲಿ ಪೂರ್ತಿ ನೀರು ತುಂಬಿಕೊಂಡಿತ್ತು. ಬೇಲಿ ಹಾಕುವ ವೇಳೆ ಉಲ್ಲಾಸ್ ಕಾಲುಜಾರಿ ನೀರಿನಲ್ಲಿ ಮುಳುಗಿದ್ದರು .ಅವರ ರಕ್ಷಣೆಗೆ ಧಾವಿಸಲು ಸತೀಶ್ ಕೂಡ ಮೃತಪಟ್ಟಿದ್ದಾರೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ