ನಾಗ್ಪುರದ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: ಐವರು ಕಾರ್ಮಿಕರು ಸಾವು

Views: 45
ಕನ್ನಡ ಕರಾವಳಿ ಸುದ್ದಿ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಉಮ್ರೆರ್ ಪಟ್ಟಣದ ಅಲ್ಯೂಮಿನಿಯಂ ಫಾಯಿಲ್ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಐದು ಜನ ಕಾರ್ಮಿಕರು ಮೃತಪಟ್ಟಿದ್ದಾರೆ.
“ಸ್ಫೋಟದಲ್ಲಿ ಹಲವು ಕಾರ್ಮಿಕರು ಗಾಯಗೊಂಡಿದ್ದು, ಈ ಪೈಕಿ ಐದು ಕಾರ್ಮಿಕರು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಕಂಪನಿಯಲ್ಲಿ ಅಲ್ಯೂಮಿನಿಯಂ ಪೌಡರ್ ಇದ್ದ ಕಾರಣ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಎಲ್ಲಾ ಪೌಡರ್ ಸುಟ್ಟು ಬೂದಿಯಾದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗುವುದು” ಎಂದು ಉಮ್ರೆಡ್ ಪೊಲೀಸ್ ಇನ್ಸ್‌ಪೆಕ್ಟರ್ ಧನಾಜಿ ಜಲಕ್ ತಿಳಿಸಿದ್ದಾರೆ.
“ನಾಗ್ಪುರದ ಉಮ್ರೆರ್ ಅಲ್ಯೂಮಿನಿಯಂ ಫಾಯಿಲ್ ಕಾರ್ಖಾನೆಯಲ್ಲಿ ಸಂಭವಿಸಿದ ಹಠಾತ್ ಸ್ಫೋಟದಲ್ಲಿ ಐವರು ಕಾರ್ಮಿಕರು ಮೃತಪಟ್ಟಿರುವ ಮಾಹಿತಿ ಇದೆ. ಸ್ಫೋಟದಲ್ಲಿ ಆರು ಕಾರ್ಮಿಕರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ತಕ್ಷಣ ನಾಗ್ಪುರ ಸರ್ಕಾರಿ ವೈದ್ಯಕೀಯ ಕಾಲೇಜಿಗೆ (ವೈದ್ಯಕೀಯ) ಸ್ಥಳಾಂತರಿಸಲಾಗಿದೆ. ನಾಗ್ಪುರದಿಂದ ಕೆಲವು ಅಗ್ನಿಶಾಮಕ ವಾಹನಗಳನ್ನು ಬಂದಿವೆ” ಎಂದು ನಾಗ್ಪುರ ಗ್ರಾಮೀಣ ಎಸ್ಪಿ ಹರ್ಷ್ ಪೊದ್ದಾರ್ ಮಾಹಿತಿ ನೀಡಿದ್ದಾರೆ.