ಇತರೆ
ತೋಡಿಗೆ ಬಿದ್ದ ವ್ಯಕ್ತಿ ಸಾವು

Views: 0
ನಡೆದುಕೊಂಡು ಹೋಗುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದು ಮೃತಪಟ್ಟ ಘಟನೆ ಉಡುಪಿ ಬೀಡಿನ ಗುಡ್ಡೆಯ ನಾಗ ಬನದ ಬಳಿ ತಡರಾತ್ರಿ ನಡೆದಿದೆ.
ಮೃತ ಪಟ್ಟ ವ್ಯಕ್ತಿಯನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೋಮಪ್ಪ ರಾಥೋಡ್ (38 )ಎಂದು ಗುರುತಿಸಲಾಗಿದೆ.
ಬೀಡಿನ ಗುಡ್ಡೆಯ ತೋಡಿನಲ್ಲಿ ಇಂದು ಬೆಳಿಗ್ಗೆ ಮೃತ ದೇಹ ಕಂಡು ಬಂದಿದ್ದನ್ನು ಸ್ಥಳೀಯರು ಕಂಡು ಮೇಲಕ್ಕೆ ಎತ್ತಿದ್ದಾರೆ.
ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲು ನೆರವಾದರು.