ಜನಮನ

ತೆಕ್ಕಟ್ಟೆ ಕಣ್ಣುಕೆರೆ ವ್ಯಕ್ತಿ ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ಬೈಕ್‌ ನಿಲ್ಲಿಸಿ ನಾಪತ್ತೆ 

Views: 224

ಕನ್ನಡ ಕರಾವಳಿ ಸುದ್ದಿ:ತೆಕ್ಕಟ್ಟೆ ಕಣ್ಣುಕೆರೆ ನಿವಾಸಿಯ ವ್ಯಕ್ತಿಯೊಬ್ಬರು ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ಬೈಕ್‌ ನಿಲ್ಲಿಸಿ ನಾಪತ್ತೆಯಾಗಿದ್ದಾರೆ.

ಗಣಪತಿ ನಾಯ್ಕ (57)ನಾಪತ್ತೆಯಾದವರು.ಅವರು ಜುಲೈ 18ರ ಬೆಳಿಗ್ಗೆ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಬೈಕ್‌ ನಿಲ್ಲಿಸಿ, ಮನೆಗೂ ಬಾರದೇ ನಾಪತ್ತೆಯಾದ ವ್ಯಕ್ತಿ ಧರ್ಮಸ್ಥಳದ ಸಿರಿಗ್ರಾಮೋದ್ಯೋಗ ಸಂಸ್ಥೆಯ ಕುಂದಾಪುರ ಶಾಖೆಯ ಹೋಮ್ ಪ್ರಾಡಕ್ಟ್ ವಿತರಕರಾಗಿದ್ದ ಅವರು ಮನೆಯಿಂದ ಬೈಕ್‌ನಲ್ಲಿ ಹೇರಿಕುದ್ರುವಿನ ಗೋಡೌನ್‌ಗೆ ಹೋಗಿ ಆ ಬಳಿಕ ಶಾಸ್ತ್ರಿ ಸರ್ಕಲ್‌ನಲ್ಲಿ ಬೈಕ್‌ ನಿಲ್ಲಿಸಿ, ಹೋದವರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಇಲ್ಲಿಯವರೆಗೂ ಪತ್ತೆಯಾಗಿಲ್ಲ. ಪುತ್ರ ನವೀನ್ ಕುಮಾರ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button